Publish Date: Mon, 06 Dec 2021 (09:10 IST)
Updated Date: Mon, 06 Dec 2021 (09:19 IST)
ನ್ಯೂಯಾರ್ಕ್: ತಾಯಿಯಾದವಳು ತನ್ನ ಮಕ್ಕಳಿಗೆ ಎದೆಹಾಲುಣಿಸುವುದು ಕೇಳಿದ್ದೇವೆ. ಆದರೆ ಇಲ್ಲೊಬ್ಬ ಮಹಿಳೆ ತನ್ನ ಸಾಕು ಬೆಕ್ಕಿಗೆ ಎದೆ ಹಾಲುಣಿಸಿ ಸುದ್ದಿಯಾಗಿದ್ದಾಳೆ.
ನ್ಯೂಯಾರ್ಕ್ ನಿಂದ ಜಾರ್ಜಿಯಾಗೆ ತೆರಳುತ್ತಿದ್ದ ಡೆಲ್ಟಾ ಏರ್ ವೇಸ್ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರು ಕಂಬಳಿಯಲ್ಲಿ ಸುತ್ತಿ ತಮ್ಮ ಬೆಕ್ಕಿನ ಮರಿಯನ್ನು ಜೊತೆಗೆ ಕರೆತಂದಿದ್ದರು. ವಿಮಾನ ಸಿಬ್ಬಂದಿ ಇದನ್ನು ಸರಕು ವಿಭಾಗಕ್ಕೆ ಹಾಕಲು ಹೇಳಿದರೂ ಆಕೆ ಒಪ್ಪಿರಲಿಲ್ಲ.
ಬಳಿಕ ಎಲ್ಲರೂ ನೋಡುತ್ತಿರುವಂತೇ ಬೆಕ್ಕಿಗೆ ಎದೆಹಾಲುಣಿಸಿದ್ದಾಳೆ. ವಿಮಾನ ಸಿಬ್ಬಂದಿ ಹೀಗೆ ಮಾಡದಂತೆ ಹೇಳಿದರೂ ಕ್ಯಾರೇ ಎಂದಿರಲಿಲ್ಲ. ಕೊನೆಗೆ ವಿಮಾನ ಸಿಬ್ಬಂದಿ ಕಂಟ್ರೋಲ್ ರೂಂಗೆ ದೂರು ನೀಡಬೇಕಾಗಿ ಬಂದಿದೆ.