ಮುಂಬೈ: ನ್ಯೂಜಿಲೆಂಡ್ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಅತ್ಯುತ್ತಮ ಪಿಚ್ ತಯಾರಿಸಿ ವಾಂಖೆಡೆ ಮೈದಾನ ಸಿಬ್ಬಂದಿಗೆ ಟೀಂ ಇಂಡಿಯಾ ಕ್ರಿಕೆಟಿಗರು ನಗದಿನ ರೂಪದಲ್ಲಿ ಬಹುಮಾನ ಕೊಟ್ಟಿದ್ದಾರೆ.
ಸರಣಿ ಗೆಲುವಿನ ಬಳಿಕ ವಾಂಖೆಡೆ ಮೈದಾನ ಸಿಬ್ಬಂದಿಗೆ ಕ್ರಿಕೆಟಿಗರು 35,000 ರೂ. ಗಳನ್ನು ನೀಡಿದ್ದಾರೆ. ಈ ಪಿಚ್ ನಲ್ಲಿ ಬ್ಯಾಟಿಂಗ್ ಮತ್ತು ಬೌಲರ್ ಗಳಿಗೆ ಎರಡಕ್ಕೂ ನೆರವಾಗಿತ್ತು. ಟೆಸ್ಟ್ ಕ್ರಿಕೆಟ್ ಗೆ ಹೇಳಿ ಮಾಡಿಸಿದ ಟ್ರ್ಯಾಕ್ ನಿರ್ಮಿಸಿದ್ದಕ್ಕೆ ಖುಷಿಯಾಗಿ ಕ್ರಿಕೆಟಿಗರು ಗಿಫ್ಟ್ ನೀಡಿದ್ದಾರೆ.
ಕಾನ್ಪುರದಲ್ಲಿ ಟೆಸ್ಟ್ ಡ್ರಾಗೊಂಡ ಬಳಿಕ ಕೋಚ್ ರಾಹುಲ್ ದ್ರಾವಿಡ್ ಮೈದಾನ ಸಿಬ್ಬಂದಿಗೆ 35 ಸಾವಿರ ರೂ. ನಗದು ಬಹುಮಾನವಾಗಿ ನೀಡಿದ್ದರು. ಇದೀಗ ಕ್ರಿಕೆಟಿಗರ ಸರದಿ.