Publish Date: Tue, 07 Dec 2021 (09:05 IST)
Updated Date: Tue, 07 Dec 2021 (09:24 IST)
ಮುಂಬೈ: ಟೀಂ ಇಂಡಿಯಾದಂತಹ ಪ್ರತಿಭಾವಂತರ ತಂಡದಲ್ಲಿ ಅರ್ಹ ಆಟಗಾರರಿಗೆ ಆಡುವ ಬಳಗದಲ್ಲಿ ಸ್ಥಾನ ನೀಡುವುದು ಟೀಂ ಮ್ಯಾನೇಜ್ ಮೆಂಟ್ ಗೆ ದೊಡ್ಡ ತಲೆನೋವು. ಇಂತಹ ಸಂದರ್ಭದಲ್ಲಿ ದ್ರಾವಿಡ್ ಏನು ಮಾಡುತ್ತಾರೆ ಗೊತ್ತಾ?
ಮುಂಬೈ ಟೆಸ್ಟ್ ಗೆಲುವಿನ ಬಳಿಕ ತಮ್ಮ ತಂಡದ ಯುವ ಆಟಗಾರರಿಗೆ ಅವಕಾಶ ನೀಡುವುದು ಮತ್ತು ಹಿರಿಯರಿಗೆ ವಿಶ್ರಾಂತಿ ನೀಡುವುದರ ಬಗ್ಗೆ ದ್ರಾವಿಡ್ ಮನಬಿಚ್ಚಿ ಮಾತನಾಡಿದ್ದಾರೆ.
ತಂಡದಲ್ಲಿ ಇಷ್ಟೊಂದು ಪ್ರತಿಭಾವಂತರಿದ್ದಾರೆ ಎನ್ನುವುದು ಒಳ್ಳೆಯ ವಿಚಾರ. ಆಡುವ ಬಳಗವನ್ನು ಆಯ್ಕೆ ಮಾಡುವುದು ನಮಗೆ ಯಾವತ್ತೂ ಸಮಸ್ಯೆ ಎನಿಸಿಲ್ಲ. ಒಬ್ಬರಿಲ್ಲದೇ ಹೋದರೆ ಮತ್ತೊಬ್ಬ ಬ್ಯಾಕ್ ಅಪ್ ಆಟಗಾರರಿರುತ್ತಾರೆ. ಯಾವುದೇ ಆಟಗಾರರಿಗೆ ವಿಶ್ರಾಂತಿ ನೀಡುವಾಗ ಅವರೊಂದಿಗೆ ಯಾಕೆ ಹೊರಗಿಡುತ್ತಿದ್ದೇವೆ ಎಂದು ಸ್ಪಷ್ಟವಾಗಿ ಸಂವಹನ ನಡೆಸುವುದು ಮುಖ್ಯ. ಹಾಗಾಗಿ ನನಗೆ ಇದೊಂದು ತಲೆನೋವು ಎಂದು ಅನಿಸಿಯೇ ಇಲ್ಲ ಎಂದು ದ್ರಾವಿಡ್ ಹೇಳಿದ್ದಾರೆ.