Select Your Language

Notifications

webdunia
webdunia
webdunia
webdunia

ಟೀಂ ಇಂಡಿಯಾದಲ್ಲಿ ಬೆಸ್ಟ್ ಡ್ಯಾನ್ಸರ್ ಯಾರು ಗೊತ್ತಾ? ಧವನ್ ಹೇಳ್ತಾರೆ ನೋಡಿ

ಟೀಂ ಇಂಡಿಯಾದಲ್ಲಿ ಬೆಸ್ಟ್ ಡ್ಯಾನ್ಸರ್ ಯಾರು ಗೊತ್ತಾ? ಧವನ್ ಹೇಳ್ತಾರೆ ನೋಡಿ
ನವದೆಹಲಿ , ಸೋಮವಾರ, 6 ಡಿಸೆಂಬರ್ 2021 (09:36 IST)
ನವದೆಹಲಿ: ಟೀಂ ಇಂಡಿಯಾ ಕ್ರಿಕೆಟಿಗರು ಡ್ರೆಸ್ಸಿಂಗ್ ರೂಂನಲ್ಲಿ ಎಷ್ಟು ಎಂಜಾಯ್ ಮಾಡ್ತಾರೆ ಎನ್ನುವುದು ಹಲವು ಬಾರಿ ನಾವು ನೋಡಿದ್ದೇವೆ. ಹಾಡು ಹೇಳುವವರು, ನೃತ್ಯ ಮಾಡುವವರಿಗೂ ಕಡಿಮೆಯೇನಲ್ಲ.

ಇದೀಗ ಶಿಖರ್ ಧವನ್ ಸಾಮಾಜಿಕ ಜಾಲತಾಣದ ಪ್ರಶ್ನೋತ್ತರದ ವೇಳೆ ಟೀಂ ಇಂಡಿಯಾ ಕ್ರಿಕೆಟಿಗರ ಎಕ್ಸ್ ಟ್ರಾ ಟ್ಯಾಲೆಂಟ್  ಬಗ್ಗೆ ಹೇಳಿಕೊಂಡಿದ್ದರು.

ಟೀಂ ಇಂಡಿಯಾದಲ್ಲಿ ಅತ್ಯುತ್ತಮವಾಗಿ ಇನ್ನೊಬ್ಬ ಕ್ರಿಕೆಟಿಗರನ್ನು ಅನುಕರಿಸುತ್ತಾರೆ. ನೀವು ಯಾರನ್ನು ಅನುಕರಿಸಿ ತೋರಿಸುತ್ತೀರಿ?’ ಎಂದು ಅಭಿಮಾನಿಯೊಬ್ಬರು ಪ್ರಶ್ನಿಸಿದ್ದಾರೆ. ಇದಕ್ಕೆ ಧವನ್ ‘ರೋಹಿತ್ ಶರ್ಮಾ ಕೂತಲ್ಲಿಯೇ ಸಾಕಷ್ಟು ಜನರನ್ನು ಇಮಿಟೇಟ್ ಮಾಡಬಲ್ಲರು’ ಎಂದಿದ್ದಾರೆ.

ಇನ್ನು, ಟೀಂ ಇಂಡಿಯಾದ ಅತ್ಯುತ್ತಮ ಡ್ಯಾನ್ಸರ್ ಯಾರು ಎಂಬ ಪ್ರಶ್ನೆಗೆ ಧವನ್ ಶ್ರೇಯಸ್ ಐಯರ್ ಹೆಸರು ಹೇಳಿದ್ದಾರೆ. ಡೆಲ್ಲಿ ಮೂಲದ ಶ್ರೇಯಸ್ ಇತ್ತೀಚೆಗಷ್ಟೇ ಟೆಸ್ಟ್ ಗೆ ಪಾದಾರ್ಪಣೆ ಮಾಡಿದ್ದರು. ಅವರು ಟೀಂ ಇಂಡಿಯಾದ ಅತ್ಯುತ್ತಮ ನೃತ್ಯಗಾರನೆಂದು ಧವನ್ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಶಾಂತ್, ಅಜಿಂಕ್ಯಾ ರೆಹಾನೆಗೆ ಗೌರವಯುತವಾಗಿ ಗೇಟ್ ಪಾಸ್?!