ಮುಂಬೈ: ನ್ಯೂಜಿಲೆಂಡ್ ವಿರುದ್ಧ ದ್ವಿತೀಯ ಟೆಸ್ಟ್ ಪಂದ್ಯದಿಂದ ಅಜಿಂಕ್ಯಾ ರೆಹಾನೆ ಮತ್ತು ಇಶಾಂತ್ ಶರ್ಮಾರನ್ನು ಗಾಯದ ಕಾರಣ ನೀಡಿ ಆಡುವ ಬಳಗದಿಂದ ಹೊರಹಾಕಲಾಗಿದೆ.
ಅಸಲಿಗೆ ಈ ಇಬ್ಬರು ಆಟಗಾರರನ್ನು ಗೌರವಯುತವಾಗಿ ಹೊರಹಾಕಲಾಗಿದೆಯೇ ಎಂಬ ಅನುಮಾನವಿದೆ. ರೆಹಾನೆಗೆ ಸತತ ಅವಕಾಶ ಸಿಕ್ಕಿಯೂ ಇದುವರೆಗೆ ಅವರಿಂದ ಹೇಳಿಕೊಳ್ಳುವಂತಹ ಪ್ರದರ್ಶನ ಬಂದಿಲ್ಲ. ಅತ್ತ ಇಶಾಂತ್ ಶರ್ಮಾ ಕಳೆದ ಪಂದ್ಯದಲ್ಲಿ ಎರಡೂ ಇನಿಂಗ್ಸ್ ಗಳಲ್ಲಿ ವಿಕೆಟ್ ಕೀಳಲು ವಿಫಲರಾಗಿದ್ದರು.
ಹೀಗಾಗಿ ಇಬ್ಬರನ್ನೂ ಗಾಯದ ನೆಪವೊಡ್ಡಿ ಗೌರವಯುತವಾಗಿ ಹೊರಹಾಕಲಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಕೊಹ್ಲಿ ಅನುಪಸ್ಥಿತಿಯಲ್ಲಿ ತಂಡದ ನಾಯಕತ್ವ ವಹಿಸುವ ರೆಹಾನೆ ಈಗಲಾದರೂ ತಮ್ಮ ಸ್ಥಾನ ಅರಿತು ಫಾರ್ಮ್ ಕಂಡುಕೊಳ್ಳಲು ಯತ್ನಿಸದೇ ಹೋದಲ್ಲಿ ಮುಂಬರುವ ದಕ್ಷಿಣ ಆಫ್ರಿಕಾ ಸರಣಿಯಲ್ಲೂ ಅವರಿಗೆ ಅವಕಾಶ ಸಿಗುವ ಸಾಧ‍್ಯತೆ ಕಡಿಮೆ.