Publish Date: Sun, 05 Dec 2021 (11:35 IST)
Updated Date: Sun, 05 Dec 2021 (08:59 IST)
ಮುಂಬೈ: ಮುಂಬೈ ಟೆಸ್ಟ್ ನಲ್ಲಿ ಮತ್ತೊಂದು ಅವಕಾಶ ಸಿಕ್ಕರೂ ಟೀಂ ಇಂಡಿಯಾ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ ಪೂಜಾರ ಪ್ಲಾಪ್ ಶೋ ಮುಂದುವರಿದಿದೆ.
ಇದೀಗ ತಂಡದಲ್ಲಿ ಮೂವರು ಗಾಯಾಳುಗಳಾಗಿದ್ದರಿಂದ ಪೂಜಾರಗೆ ಈ ಟೆಸ್ಟ್ ನಲ್ಲಿ ಮತ್ತೊಂದು ಅವಕಾಶ ಸಿಕ್ಕಿತ್ತು. ಆದರೆ ಅದನ್ನು ಬಳಸಿಕೊಳ್ಳಲೂ ಅವರು ವಿಫಲರಾದರು.
ಹೀಗೇ ಆದಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಒಂದು ವೇಳೆ ಅವರು ತಂಡಕ್ಕೆ ಆಯ್ಕೆಯಾದರೂ ಆಡುವ ಬಳಗದಲ್ಲಿ ಅವಕಾಶ ಸಿಗುವುದು ಕಡಿಮೆ. ಆಫ್ರಿಕಾ ಸರಣಿ ವೇಳೆಗೆ ರೋಹಿತ್ ಶರ್ಮಾ ಕೂಡಾ ತಂಡಕ್ಕೆ ವಾಪಸಾದರೆ ಆಗ ಪೂಜಾರ ಸ್ಥಾನ ಕಳೆದುಕೊಳ‍್ಳಬೇಕಾದೀತು.