Select Your Language

Notifications

webdunia
webdunia
webdunia
webdunia

10 ವಿಕೆಟ್ ಸಾಧನೆಯನ್ನು ಎರಡು ಬಾರಿ ಕಣ್ಣಾರೆ ಕಂಡ ರಾಹುಲ್ ದ್ರಾವಿಡ್

10 ವಿಕೆಟ್ ಸಾಧನೆಯನ್ನು ಎರಡು ಬಾರಿ ಕಣ್ಣಾರೆ ಕಂಡ ರಾಹುಲ್ ದ್ರಾವಿಡ್
ಮುಂಬೈ , ಶನಿವಾರ, 4 ಡಿಸೆಂಬರ್ 2021 (14:38 IST)
ಮುಂಬೈ: ನ್ಯೂಜಿಲೆಂಡ್ ಮತ್ತು ಭಾರತ ನಡುವಿನ ಟೆಸ್ಟ್ ಪಂದ್ಯದಲ್ಲಿ ಕಿವೀಸ್ ಬೌಲರ್ ಅಜಾಜ್ ಪಟೇಲ್ ಒಂದೇ ಇನಿಂಗ್ಸ್ ನಲ್ಲಿ ಎಲ್ಲಾ 10 ವಿಕೆಟ್ ಕಬಳಿಸಿದ ಸಾಧನೆ ಮಾಡಿದ್ದಾರೆ. ಟೀಂ ಇಂಡಿಯಾ ಕೋಚ್ ರಾಹುಲ್‍ ದ್ರಾವಿಡ್ ಪಾಲಿಗೆ ಇದು ವಿಶೇಷ ಸಂದರ್ಭ.

ಯಾಕೆಂದರೆ ಈ ಹಿಂದೆ ಈ ಸಾಧನೆ ಮಾಡಿದ್ದು ಟೀಂ ಇಂಡಿಯಾ ಸ್ಪಿನ್ ದಿಗ್ಗಜ ಅನಿಲ್ ಕುಂಬ್ಳೆ. ಪಾಕಿಸ್ತಾನ ವಿರುದ್ಧ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ಕುಂಬ್ಳೆ ಈ ಸಾಧನೆ ಮಾಡಿದ್ದರು.

ಆ ಸಂದರ್ಭದಲ್ಲಿಯೂ ದ್ರಾವಿಡ್ ಆಟಗಾರನಾಗಿ ಕುಂಬ್ಳೆ ಜೊತೆಯಲ್ಲಿದ್ದು, ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದ್ದರು. ಇದೀಗ ಎದುರಾಳಿ ತಂಡದ ಬೌಲರ್ 10 ವಿಕೆಟ್ ಪಡೆಯುವ ವೇಳೆಯೂ ದ್ರಾವಿಡ್ ಟೀಂ ಇಂಡಿಯಾ ಕೋಚ್ ಆಗಿ ಪ್ರತ್ಯಕ್ಷದರ್ಶಿಯಾಗಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಕೇವಲ ಮೂರು ಬಾರಿ ಮಾತ್ರ 10 ವಿಕೆಟ್ ಸಾಧನೆಯಾಗಿದೆ. ಈ  ಪೈಕಿ ಎರಡೂ ಬಾರಿಯೂ ದ್ರಾವಿಡ್ ಇದಕ್ಕೆ ಸಾಕ್ಷಿಯಾಗಿದ್ದು ವಿಶೇಷ.

Share this Story:

Follow Webdunia kannada

ಮುಂದಿನ ಸುದ್ದಿ

ಒಂದೇ ಇನಿಂಗ್ಸ್ ನಲ್ಲಿ 10 ವಿಕೆಟ್ ಸಾಧನೆ ಮಾಡಿದ ಕಿವೀಸ್ ಬೌಲರ್ ಅಜಾಜ್ ಪಟೇಲ್