Publish Date: Fri, 03 Dec 2021 (16:49 IST)
Updated Date: Fri, 03 Dec 2021 (16:50 IST)
ಮುಂಬೈ: ನ್ಯೂಜಿಲೆಂಡ್ ವಿರುದ್ಧ ದ್ವಿತೀಯ ಟೆಸ್ಟ್ ನಲ್ಲಿ ಟೀಂ ಇಂಡಿಯಾ ಮಯಾಂಕ್ ಅಗರ್ವಾಲ್ ಶತಕದ ನೆರವಿನಿಂದ ಟೀಂ ಇಂಡಿಯಾ ಇತ್ತೀಚೆಗಿನ ವರದಿ ಬಂದಾಗ 4 ವಿಕೆಟ್ ನಷ್ಟಕ್ಕೆ 193ರನ್ ಗಳಿಸಿದೆ.
ಬೌಂಡರಿ ಮೂಲಕ ಶತಕ ಪೂರೈಸಿದ ಮಯಾಂಕ್ ಸಂಭ್ರಮಿಸಿದರು. ಇನ್ನೊಂದೆಡೆ ವೃದ್ಧಿಮಾನ್ ಸಹಾ 16 ರನ್ ಗಳಿಸಿ ಸಾಥ್ ನೀಡಿದ್ದಾರೆ.
ವಿರಾಟ್ ಕೊಹ್ಲಿ ಮತ್ತು ಚೇತೇಶ್ವರ ಪೂಜಾರ ಬೆನ್ನು ಬೆನ್ನಿಗೇ ಶೂನ್ಯಕ್ಕೆ ನಿರ್ಗಮಿಸಿದಾಗ ಮಯಾಂಕ್ ಭಾರತಕ್ಕೆ ಆಸರೆಯಾದರು. 13 ಬೌಂಡರಿ 3 ಸಿಕ್ಸರ್ ಗಳೊಂದಿಗೆ ಅಜೇಯ 101 ರನ್ ಗಳಿಸಿದ್ದಾರೆ. ಶ್ರೇಯಸ್ ಐಯರ್ 18 ರನ್ ಗಳಿಸಿ ಔಟಾದರು. ಶುಬ್ನಂ ಗಿಲ್ 44 ರನ್ ಗಳಿಸಿ ಔಟಾದರು.