ಮುಂಬೈ: ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಇಂದಿನಿಂದ ದ್ವಿತೀಯ ಟೆಸ್ಟ್ ಪಂದ್ಯ ಆರಂಭವಾಗಲಿದ್ದು, ಎಲ್ಲರ ಕಣ್ಣು ಭಾರತದ ಆಡುವ ಬಳಗದ ಮೇಲಿದೆ.
ಈ ಪಂದ್ಯಕ್ಕೆ ಕೊಹ್ಲಿ ಪುನರಾಗಮನವಾಗಿದೆ. ಹೀಗಾಗಿ ಅವರು ಆಡುವ ಬಳಗದಲ್ಲಿ ಸ್ಥಾನ ಪಡೆಯಲು ಯಾರಾದರೊಬ್ಬರೂ ಸ್ಥಾನ ಬಿಟ್ಟುಕೊಡಲೇಬೇಕಾಗಿದೆ. ಹೀಗಾಗಿ ಮಯಾಂಕ್, ಚೇತೇಶ್ವರ ಪೂಜಾರ ಮತ್ತು ಅಜಿಂಕ್ಯಾ ರೆಹಾನೆ ಮೂವರಲ್ಲಿ ಒಬ್ಬರು ಸ್ಥಾನ ಕಳೆದುಕೊಳ್ಳುವುದು ಖಂಡಿತಾ.
ಒಂದು ವೇಳೆ ಇದು ವೇಗಿಗಳಿಗೆ ನೆರುವ ನೀಡುವ ಪಿಚ್ ಆದರೆ ಮಾತ್ರ ಇಶಾಂತ್ ಶರ್ಮಾ ಸ್ಥಾನ ಉಳಿಸಿಕೊಳ್ಳಬಹುದು. ಇಲ್ಲದೇ ಹೋದರೆ ಉಮೇಶ್ ಯಾದವ್ ಜೊತೆ ಮೊಹಮ್ಮದ್ ಸಿರಾಜ್ ಗೆ ಅವಕಾಶ ಸಿಗಬಹುದು. ಇನ್ನು, ವಿಕೆಟ್ ಕೀಪರ್ ವೃದ್ಧಿಮಾನ್ ಸಹಾ ಕುತ್ತಿಗೆ ನೋವಿನಿಂದ ಚೇತರಿಸಿಕೊಳ್ಳದೇ ಇದ್ದರೆ ಯುವ ಆಟಗಾರ ಶ್ರೀಕರ್ ಭರತ್ ಗೆ ಅವಕಾಶ ಸಿಗಲಿದೆ.