Publish Date: Fri, 03 Dec 2021 (11:35 IST)
Updated Date: Fri, 03 Dec 2021 (11:37 IST)
ಮುಂಬೈ: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದೆ.
ಈ ಪಂದ್ಯವನ್ನು ಭಾರತ ಅಥವಾ ನ್ಯೂಜಿಲೆಂಡ್ ಯಾವುದೇ ತಂಡ ಗೆದ್ದುಕೊಂಡರೂ ಸರಣಿ ಆ ತಂಡದ ಕೈವಶವಾಗಲಿದೆ. ಮೊದಲ ಪಂದ್ಯ ರೋಚಕ ಡ್ರಾನಲ್ಲಿ ಅಂತ್ಯವಾಗಿತ್ತು.
ಟೀಂ ಇಂಡಿಯಾ ಇಂದಿನ ಪಂದ್ಯದಲ್ಲಿ ಕೆಲವು ಬದಲಾವಣೆಗಳೊಂದಿಗೆ ಕಣಕ್ಕಿಳಿದಿದೆ. ನಾಯಕ ಕೊಹ್ಲಿ ಕಮ್ ಬ್ಯಾಕ್ ಮಾಡಿದ್ದು, ರೆಹಾನೆ, ಜಡೇಜಾ, ಇಶಾಂತ್ ಗಾಯದಿಂದಾಗಿ ಹೊರಗುಳಿದಿದ್ದಾರೆ. ಅವರ ಸ್ಥಾನಕ್ಕೆ ಜಯಂತ್ ಯಾದವ್ ಮತ್ತು ಮೊಹಮ್ಮದ್ ಸಿರಾಜ್ ಆಗಮನವಾಗಿದೆ.