Publish Date: Fri, 03 Dec 2021 (10:17 IST)
Updated Date: Fri, 03 Dec 2021 (10:19 IST)
ಮುಂಬೈ: ಟೀಂ ಇಂಡಿಯಾ ವಿರುದ್ಧ ದ್ವಿತೀಯ ಟೆಸ್ಟ್ ಆಡಲಿರುವ ನ್ಯೂಜಿಲೆಂಡ್ ಗೆ ನಾಯಕ ಕೇನ್ ವಿಲಿಯಮ್ಸನ್ ರೂಪದಲ್ಲಿ ಶಾಕ್ ಸಿಕ್ಕಿದೆ.
ಕೇನ್ ವಿಲಿಯಮ್ಸನ್ ಮೊಣಕೈ ನೋವಿನಿಂದ ಬಳಲುತ್ತಿದ್ದು ಇಂದಿನ ಪಂದ್ಯಕ್ಕೆ ಗೈರಾಗಿದ್ದಾರೆ. ಅವರ ಸ್ಥಾನದಲ್ಲಿ ಟಾಮ್ ಲಥಾಮ್ ತಂಡವನ್ನು ಮುನ್ನಡೆಸಲಿದ್ದಾರೆ.
2021 ರಿಂದಲೂ ಕೇನ್ ವಿಲಿಯಮ್ಸನ್ ಗೆ ಟೆನಿಸ್ ಎಲ್ಬೋ ಸಮಸ್ಯೆಯಿದೆ. ಆಗಾಗ ಈ ಸಮಸ್ಯೆ ಅವರಿಗೆ ಕಾಡುತ್ತಿರುತ್ತದೆ. ಭಾರತ ತಂಡದಲ್ಲೂ ಮೂವರು ಗಾಯಗೊಂಡಿದ್ದು, ರೆಹಾನೆ, ಜಡೇಜಾ, ಇಶಾಂತ್ ಶರ್ಮಾ ಈ ಪಂದ್ಯದಲ್ಲಿ ಆಡುತ್ತಿಲ್ಲ.