ಮುಂಬೈ: ನ್ಯೂಜಿಲೆಂಡ್ ವಿರುದ್ಧ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವಿರುದ್ಧ ನೀಡಿದ್ದ ಎಲ್ ಬಿಡಬ್ಲ್ಯು ತೀರ್ಪು ವಿವಾದಕ್ಕೆ ಕಾರಣವಾಗಿದೆ.
ಕೊಹ್ಲಿ ಕಿವೀಸ್ ಬೌಲರ್ ಅಜಾಜ್ ಪಟೇಲ್ ಬೌಲಿಂಗ್ ನಲ್ಲಿ ಎಲ್ ಬಿ ಡಬ್ಲ್ಯು ಆಗಿ ಔಟಾಗಿದ್ದರು. ಆದರೆ ಅಸಲಿಗೆ ಇಲ್ಲಿ ಬಾಲ್ ಮೊದಲು ಬ್ಯಾಟ್ ಗೆ ತಗುಲಿ ಪ್ಯಾಡ್ ಗೆ ತಗುಲಿತ್ತು ಎಂಬ ಅನುಮಾನವಿದೆ.
ಆನ್ ಫೀಲ್ಡ್ ಅಂಪಾಯರ್ ನೀಡಿದ್ದ ಔಟ್ ತೀರ್ಪು ಪ್ರಶ್ನಿಸಿ ಕೊಹ್ಲಿ ಡಿಆರ್ ಎಸ್ ಗೆ ಮನವಿ ಮಾಡಿದ್ದರು. ಆದರೆ ಅಲ್ಲಿಯೂ ಮೊದಲು ಚೆಂಡು ಪ್ಯಾಡ್ ಗೆ ಬಡದಿತ್ತೇ ಅಥವಾ ಬ್ಯಾಟ್ ಸವರಿತ್ತೇ ಎನ್ನುವುದು ಸ್ಪಷ್ಟವಾಗಲಿಲ್ಲ. ಹೀಗಾಗಿ ಥರ್ಡ್ ಅಂಪಾಯರ್ ಅನುಮಾನದ ಲಾಭದ ಮೇರೆಗೆ ಔಟ್ ತೀರ್ಪು ನೀಡಿದರು. ಇದು ಸ್ವತಃ ಕೊಹ್ಲಿ ಅಸಮಾಧಾನಕ್ಕೆ ಕಾರಣವಾಯಿತು.