Select Your Language

Notifications

webdunia
webdunia
webdunia
webdunia

ಮುಂಬೈ ಟೆಸ್ಟ್: ಅಶ್ವಿನ್, ಅಜಾಜ್ ಪಟೇಲ್ ಅಪರೂಪದ ದಾಖಲೆಗಳು

ಮುಂಬೈ ಟೆಸ್ಟ್: ಅಶ್ವಿನ್, ಅಜಾಜ್ ಪಟೇಲ್ ಅಪರೂಪದ ದಾಖಲೆಗಳು
ಮುಂಬೈ , ಸೋಮವಾರ, 6 ಡಿಸೆಂಬರ್ 2021 (10:54 IST)
ಮುಂಬೈ: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ದ್ವಿತೀಯ ಟೆಸ್ಟ್ ಪಂದ್ಯ ಹಲವು ಸ್ಮರಣೀಯ ಕ್ಷಣಗಳಿಗೆ ಸಾಕ್ಷಿಯಾಗಿದೆ. ಹಲವು ದಾಖಲೆಗಳು ಈ ಪಂದ್ಯದಲ್ಲಿ ದಾಖಲಾಗಿವೆ.

ಇದು ಭಾರತದ ಪಾಲಿಗೆ ರನ್ ಅಂತರದ ಬಹುದೊಡ್ಡ ಗೆಲುವಾಗಿದೆ. ಇದಕ್ಕೂ ಮೊದಲು 2015 ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 337 ರನ್ ಗಳಿಂದ ಗೆದ್ದಿದ್ದೇ ದಾಖಲೆಯಾಗಿತ್ತು. ಅಲ್ಲದೆ ನ್ಯೂಜಿಲೆಂಡ್ ವಿರುದ್ಧ ಭಾರತದ ಅತೀ ದೊಡ್ಡ ಗೆಲುವು ಇದಾಗಿದೆ.

ಇನ್ನು ಭಾರತೀಯ ಬೌಲರ್ ರವಿಚಂದ್ರನ್ ಅಶ್ವಿನ್ ಮತ್ತು ಕಿವೀಸ್ ಬೌಲರ್ ಅಜಾಜ್ ಪಟೇಲ್ ಪಾಲಿಗೆ ಇದು ಸ್ಮರಣೀಯ ಟೆಸ್ಟ್. ಅಜಾಜ್ ಪಟೇಲ್ ಒಂದೇ ಇನಿಂಗ್ಸ್ ನ ಎಲ್ಲಾ 10 ವಿಕೆಟ್ ಪಡೆದು ದಾಖಲೆ ಮಾಡಿದ್ದಲ್ಲದೆ, ಬ್ಯಾಟಿಂಗ್ ನಲ್ಲಿ ಎರಡೂ ಇನಿಂಗ್ಸ್ ಗಳಲ್ಲಿ ಅಜೇಯವಾಗುಳಿದು ಅಪರೂಪದ ದಾಖಲೆ ಮಾಡಿದರು.

ರವಿಚಂದ್ರನ್ ಅಶ್ವಿನ್ ಭಾರತ-ನ್ಯೂಜಿಲೆಂಡ್ ನಡುವಿನ ಟೆಸ್ಟ್ ಪಂದ್ಯಗಳಲ್ಲಿ ಗರಿಷ್ಠ ವಿಕೆಟ್ ಪಡೆದ ದಾಖಲೆ ಮಾಡಿದ್ದಲ್ಲದೆ, ಭಾರತದಲ್ಲಿ 300 ನೇ ಟೆಸ್ಟ್ ವಿಕೆಟ್ ಪಡೆದ ಸಾಧನೆ ಮಾಡಿದರು. ಅಲ್ಲದೆ ತವರಿನಲ್ಲಿ ವೇಗವಾಗಿ 300 ವಿಕೆಟ್ ಸಾಧನೆ ಮಾಡಿದ ಆಟಗಾರರ ಪಟ್ಟಿಯಲ್ಲಿ ಮುತ್ತಯ್ಯ ಮುರಳೀಧರನ್ ನಂತರ ಎರಡನೇ ಸ್ಥಾನ ಪಡೆದರು.

ಈ ಪಂದ್ಯದಲ್ಲಿ ಒಂದು ಶತಕ, ಅರ್ಧಶತಕ ಗಳಿಸಿದ ಮಯಾಂಕ್ ಅಗರ್ವಾಲ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರೆ ಎರಡೂ ಪಂದ್ಯಗಳಲ್ಲಿ ಬೌಲಿಂಗ್ ಮತ್ತು ಬ್ಯಾಟಿಂಗ್ ನಲ್ಲಿ ಅದ್ಭುತ ಪ್ರದರ್ಶನ ನೀಡಿದ ರವಿಚಂದ್ರನ್ ಅಶ್ವಿನ್ ಸರಣಿ ಶ್ರೇಷ್ಠರಾದರು.

Share this Story:

Follow Webdunia kannada

ಮುಂದಿನ ಸುದ್ದಿ

ಮುಂಬೈ ಟೆಸ್ಟ್: ದಾಖಲೆಯ ಅಂತರದಲ್ಲಿ ಗೆದ್ದ ಟೀಂ ಇಂಡಿಯಾ