ಬೆಂಗಳೂರು: ಕ್ರಿಕೆಟ್ ದಿಗ್ಗಜ ಅನಿಲ್ ಕುಂಬ್ಳೆ ಕನ್ನಡ ಕಿರುತೆರೆಯ ಶೋ ಒಂದರಲ್ಲಿ ಈ ವಾರಾಂತ್ಯದಲ್ಲಿ ನಿಮ್ಮ ಮುಂದೆ ಬರಲಿದ್ದಾರೆ. ಯಾವ ಶೋ ಗೊತ್ತಾ?
ಜೀ ಕನ್ನಡದಲ್ಲಿ ಪ್ರಸಾರವಾಗುವ ಸರಿಗಮಪ ಹಾಡಿನ ರಿಯಾಲಿಟಿ ಶೋನಲ್ಲಿ ಅನಿಲ್ ಕುಂಬ್ಳೆ ಈ ವಾರ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ಹಂಸಲೇಖ, ವಿಜಯ್ ಪ್ರಕಾಶ್, ಅರ್ಜುನ್ ಜನ್ಯಾ ತೀರ್ಪುಗಾರರಾಗಿರುವ ಶೋನಲ್ಲಿ ಅನಿಲ್ ಕುಂಬ್ಳೆ ಕೂಡಾ ಹಾಡುಗಳನ್ನು ಎಂಜಾಯ್ ಮಾಡಲಿದ್ದಾರೆ.
ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಅನಿಲ್ ಕುಂಬ್ಳೆಯನ್ನು ಸಾಧಕರ ಸೀಟ್ ನಲ್ಲಿ ನೋಡಬೇಕು ಎಂದು ವೀಕ್ಷಕರು ಆಗ್ರಹಿಸಿದ್ದರು. ಆದರೆ ಅದು ಸಾಧ‍್ಯವಾಗಿರಲಿಲ್ಲ. ಈಗ ಸರಿಗಮಪ ಶೋನಲ್ಲಿ ಆ ಕನಸು ನನಸಾಗುತ್ತಿದೆ. ಅನಿಲ್ ಕುಂಬ್ಳೆ ಮಾತುಗಳನ್ನು ಕೇಳಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.