ಬೆಂಗಳೂರು: ವಿಕ್ರಾಂತ್ ರೋಣ ಸಿನಿಮಾ ಸ್ಯಾಂಡಲ್ ವುಡ್ ನಲ್ಲಿ ಹೊಸ ನಿರೀಕ್ಷೆ ಹುಟ್ಟಿಸಿದೆ. ಈ ಸಿನಿಮಾ ಕೆಜಿಎಫ್ ನ್ನು ಮೀರಿಸುತ್ತಾ ಎಂಬ ಪ್ರಶ್ನೆಗೆ ಸುದೀಪ್ ಇತ್ತೀಚೆಗೆ ಸಂದರ್ಶನವೊಂದರಲ್ಲಿ ತಕ್ಕ ಉತ್ತರ ನೀಡಿದ್ದಾರೆ.
ವಿಕ್ರಾಂತ್ ರೋಣ ಕೆಜಿಎಫ್ ನ್ನು ಮೀರಿಸಬೇಕು ಎನ್ನುವ ಉದ್ದೇಶ ನಮಗಿಲ್ಲ. ಕೆಜಿಎಫ್ ಅಷ್ಟರಮಟ್ಟಿಗೆ ಯಶಸ್ಸು ಕಂಡಿದೆ ಎಂದರೆ ಅದಕ್ಕೆ ಅದರ ಹಿಂದಿನ ಪರಿಶ್ರಮವೇ ಕಾರಣ ಎಂದಿದ್ದಾರೆ.
ಇತ್ತೀಚೆಗೆ ಪುಷ್ಪ ಸಿನಿಮಾ ಕೆಜಿಎಫ್ ನ್ನು ಮೀರಿಸುತ್ತೆ ಎಂದು ಟ್ರೋಲ್ ಗೊಳಗಾಗಿತ್ತು. ಆದರೆ ಕಿಚ್ಚ ಸುದೀಪ್ ತಮ್ಮ ಸಿನಿಮಾವನ್ನು ಕೆಜಿಎಫ್ ಗೆ ಹೋಲಿಸಿಕೊಳ್ಳಲು ಇಷ್ಪಪಟ್ಟಿಲ್ಲ. ನಮ್ಮ ಸಿನಿಮಾವೇ ಬೇರೆ, ಕೆಜಿಎಫ್ ಬೇರೆ ಎಂದಿದ್ದಾರೆ.