Select Your Language

Notifications

webdunia
webdunia
webdunia
webdunia

ಕನ್ನಡ ಸಿನಿಮಾಗಳನ್ನು ಮಿಸ್ ಮಾಡ್ದೇ ನೋಡಿ ಎಂದ ರಮ್ಯಾ

ಕನ್ನಡ ಸಿನಿಮಾಗಳನ್ನು ಮಿಸ್ ಮಾಡ್ದೇ ನೋಡಿ ಎಂದ ರಮ್ಯಾ
ಬೆಂಗಳೂರು , ಬುಧವಾರ, 22 ಡಿಸೆಂಬರ್ 2021 (09:20 IST)
ಬೆಂಗಳೂರು: ನಟಿ ರಮ್ಯಾ ಸ್ಯಾಂಡಲ್ ವುಡ್ ನಿಂದ ದೂರವಿರಬಹುದು. ಆದರೆ ಈಗಲೂ ಕನ್ನಡ ಸಿನಿಮಾಗಳ ಆಗುಹೋಗುಗಗಳ ಬಗ್ಗೆ ಗಮನಕೊಡುತ್ತಿರುತ್ತಾರೆ.

ಇದೀಗ ಡಾಲಿ ಧನಂಜಯ್ ಅಭಿನಯದ ‘ಬಡವ ರಾಸ್ಕಲ್’, ನಿಖಿಲ್ ಕುಮಾರಸ್ವಾಮಿ ಅಭಿನಯದ ‘ರೈಡರ್’ ಸಿನಿಮಾಗೆ ರಮ್ಯಾ ಶುಭ ಹಾರೈಸಿದ್ದಾರೆ. ಎರಡೂ ಸಿನಿಮಾಗಳೂ ಒಂದೇ ದಿನ ಬಿಡುಗಡೆಯಾಗುತ್ತಿದೆ. ಈ ಹಿನ್ನಲೆಯಲ್ಲಿ ಎರಡೂ ಸಿನಿಮಾಗಳಿಗೆ ರಮ್ಯಾ ಶುಭ ಹಾರೈಸಿದ್ದಾರೆ.

ಜೊತೆಗೆ ಎಲ್ಲಾ ಕನ್ನಡ ಸಿನಿಮಾಗಳನ್ನೂ ನೋಡಿ ಪ್ರೋತ್ಸಾಹಿಸಿ ಎಂದು ಮನವಿ ಮಾಡಿದ್ದಾರೆ. ಇತ್ತೀಚೆಗೆ ಪ್ಯಾನ್ ಇಂಡಿಯಾ ಸಿನಿಮಾಗಳ ಹಾವಳಿಯಿಂದ ಕನ್ನಡದ ಮೂಲ ಸಿನಿಮಾಗಳಿಗೆ ತೊಂದರೆಯಾಗುತ್ತಿದೆ ಎಂಬ ಮಾತುಗಳ ಬೆನ್ನಲ್ಲೇ ರಮ್ಯಾ ಕನ್ನಡ ಸಿನಿಮಾ ಬೆಂಬಲಿಸಿ ಮಾತನಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಲವ್ ಯೂ ರಚ್ಚು ನಿರ್ಮಾಪಕರು ಅವಮಾನ ಮಾಡಿದ್ದಾರೆ: ಅಜೇಯ್ ರಾವ್ ಆರೋಪ