Publish Date: Fri, 17 Dec 2021 (09:55 IST)
Updated Date: Fri, 17 Dec 2021 (09:58 IST)
ಜೊಹಾನ್ಸ್ ಬರ್ಗ್: ದ.ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿ ಆಡಲು ಟೀಂ ಇಂಡಿಯಾ ಕ್ರಿಕೆಟಿಗರು ದಕ್ಷಿಣಾ ಆಫ್ರಿಕಾಗೆ ಬಂದಿಳಿದಿದ್ದಾರೆ.
ಬುಧವಾರ ರಾತ್ರಿ ಭಾರತದಿಂದ ಪ್ರಯಾಣ ಬೆಳೆಸಿದ್ದ ಕ್ರಿಕೆಟಿಗರು ನಿನ್ನೆ ಜೊಹಾನ್ಸ್ ಬರ್ಗ್ ಗೆ ತಲುಪಿದ್ದಾರೆ. ನಾಯಕ ವಿರಾಟ್ ಕೊಹ್ಲಿ, ಕೋಚ್ ರಾಹುಲ್ ದ್ರಾವಿಡ್ ಸೇರಿದಂತೆ ಇಡೀ ತಂಡ ಕಾಮನ ಬಿಲ್ಲಿನ ನಾಡಿಗೆ ಬಂದಿಳಿದಿದೆ.
ಒಂದು ದಿನ ಕ್ವಾರಂಟೈನ್ ಗೊಳಗಾಗಲಿರುವ ಕ್ರಿಕೆಟಿಗರು ಬಳಿಕ ಅಭ್ಯಾಸಕ್ಕಿಳಿಯಲಿದ್ದಾರೆ. ಕ್ರಿಕೆಟಿಗರ ಸುರಕ್ಷತೆ ದೃಷ್ಟಿಯಿಂದ ರೆಸಾರ್ಟ್ ಒಂದರಲ್ಲಿ ಬಯೋ ಬಬಲ್ ವಾತಾವರಣ ಸೃಷ್ಟಿಸಲಾಗಿದೆ. ಡಿಸೆಂಬರ್ 26 ರಿಂದ ಸರಣಿ ಆರಂಭವಾಗಲಿದೆ.