Publish Date: Fri, 17 Dec 2021 (09:10 IST)
Updated Date: Fri, 17 Dec 2021 (09:16 IST)
ಮುಂಬೈ: ಮೈದಾನದಲ್ಲಿ ನಿರ್ಭೀತಿಯಿಂದ ಕಾರ್ಯನಿರ್ವಹಿಸುವ ವಿರಾಟ್ ಕೊಹ್ಲಿ ತಮ್ಮನ್ನು ನಾಯಕತ್ವದಿಂದ ಪದಚ್ಯುತಗೊಳಿಸಿರುವುದರ ಬಗ್ಗೆಯೂ ನೇರವಾಗಿ ಹೇಳಿಕೆ ನೀಡಿ ಬಿಸಿಸಿಐಗೇ ಮುಜುಗರವುಂಟಾಗುವಂತೆ ಮಾಡಿದ್ದಾರೆ.
ಇದೀಗ ಬಿಸಿಸಿಐ ವಿರಾಟ್ ಪ್ರತಿಕ್ರಿಯೆಗೆ ತಕ್ಕ ಪ್ರತ್ಯುತ್ತರ ನೀಡಲು ಚರ್ಚೆಯಲ್ಲಿ ತೊಡಗಿದೆ. ಒಂದು ವೇಳೆ ವಿರಾಟ್ ಹೇಳಿಕೆಯನ್ನು ಅಲ್ಲಗಳೆದರೆ ಟೀಂ ಇಂಡಿಯಾ ನಾಯಕನ ಪ್ರತಿಷ್ಠೆಗೆ ಮಸಿ ಬಳಿದಂತೆ. ಇನ್ನು, ವಿರಾಟ್ ಹೇಳಿಕೆಯನ್ನು ಸಮರ್ಥಿಸಿಕೊಂಡರೆ ಸ್ವತಃ ಬಿಸಿಸಿಐ ಪ್ರತಿಷ್ಠೆಗೆ ಕುಂದುಂಟಾಗುತ್ತದೆ.
ಹೀಗಾಗಿ ಉನ್ನತಾಧಿಕಾರಿಗಳು ಈಗ ಕೊಹ್ಲಿ ಆರೋಪಕ್ಕೆ ತಕ್ಕ ಪ್ರತಿಕ್ರಿಯೆ ನೀಡಲು ಸಿದ್ಧತೆ ನಡೆಸುತ್ತಿದ್ದಾರೆ. ಇಬ್ಬರ ಪ್ರತಿಷ್ಠೆಗೂ ಕುಂದುಂಟಾಗದಂತೆ ಬಿಸಿಸಿಐ ಸ್ಪಷ್ಟನೆಯೊಂದನ್ನು ಸದ್ಯದಲ್ಲೇ ನೀಡಲಿದೆ.