ಬೆಂಗಳೂರು: ಜೀ ಕನ್ನಡದಲ್ಲಿ ಪ್ರಸಾರವಾಗುವ ಜನಪ್ರಿಯ ಸರಿಗಮಪ ಶೋನಲ್ಲಿ ಈ ವಾರಂತ್ಯ ಖ್ಯಾತ ಕ್ರಿಕೆಟಿಗ ಅನಿಲ್ ಕುಂಬ್ಳೆ ಭಾಗಿಯಾಗಲಿದ್ದಾರೆ.
ಅನಿಲ್ ಕುಂಬ್ಳೆ ಮುಂದೆ ಸ್ಪರ್ಧಿಗಳು ಹಾಡಲಿದ್ದಾರೆ. ಜೊತೆಗೆ ತೀರ್ಪುಗಾರರಾದ ವಿಜಯ್ ಪ್ರಕಾಶ್, ಅರ್ಜುನ್ ಜನ್ಯಾ ಜೊತೆಗೆ ತಮಾಷೆಗೆ ವೇದಿಕೆಯಲ್ಲಿ ಕ್ರಿಕೆಟ್ ಕೂಡಾ ಆಡಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ಅನಿಲ್ ಕುಂಬ್ಳೆ ಮಾಮರವೆಲ್ಲೋ ಹಾಡು ಹಾಡಿ ರಂಜಿಸಲಿದ್ದಾರೆ. ಅನಿಲ್ ಕುಂಬ್ಳೆಯನ್ನು ಕಿರುತೆರೆಯಲ್ಲಿ ನೋಡಬೇಕು ಎಂಬ ಎಷ್ಟೋ ವೀಕ್ಷಕರ ಆಸೆ ಈ ಮೂಲಕ ಈಡೇರಲಿದೆ. ಈ ಕಾರ್ಯಕ್ರಮ ಸಂಜೆ 7.30 ರಿಂದ ಪ್ರಸಾರವಾಗಲಿದೆ.