Publish Date: Sat, 25 Dec 2021 (05:04 IST)
Updated Date: Sat, 25 Dec 2021 (05:05 IST)
ಶಿವಮೊಗ್ಗ: ಇತ್ತೀಚೆಗೆ ನಿಧನರಾಗಿದ್ದ ನಟ ಪುನೀತ್ ರಾಜ್ ಕುಮಾರ್ ಗೌರವಾರ್ಥ ಶಿವಮೊಗ್ಗದ ಕುಕ್ಕಳಲೆ ಗ್ರಾಮದ ರಸ್ತೆಯೊಂದಕ್ಕೆ ಅವರ ಹೆಸರಿಡಲಾಗಿತ್ತು.
ರಸ್ತೆ ಬದಿಯಲ್ಲಿ ಪುನೀತ್ ಹೆಸರಿನ ನಾಮಫಲಕ ಸ್ಥಾಪಿಸಲಾಗಿತ್ತು. ಆದರೆ ಇದೀಗ ಯಾರೋ ಕಿಡಿಗೇಡಿಗಳು ಅವರ ಹೆಸರಿನ ಮೇಲೆ ವೈಟ್ ವಾಶ‍್ ಮಾಡಿ ಅಗಲಿದ ನಟನಿಗೆ ಅವಮಾನ ಮಾಡಿದ್ದಾರೆ.
ಪುನೀತ್ ನಿಧನರಾದ ಬಳಿಕ ಅವರ ಸಾಮಾಜಿಕ ಕಾರ್ಯ ನೆನೆದು ಹಲವು ರಸ್ತೆಗಳು, ಪಾರ್ಕ್ ಗಳಿಗೆ ಹೆಸರಿಟ್ಟು ಗೌರವ ಸೂಚಿಸಲಾಗಿತ್ತು. ಆದರೆ ಇದೀಗ ಯಾರೋ ಕಿಡಿಗೇಡಿಗಳು ಈ ಕೃತ್ಯವೆಸಗಿದ್ದು, ಪುನೀತ್ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.