ಮಂಗಳೂರು: ಸ್ಯಾಂಡಲ್ ವುಡ್ ನ ಡಿಂಪಲ್ ಕ್ವೀನ್ ರಚಿತಾ ರಾಂ ಮಂಗಳೂರಿನ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಕಾಣಿಸಿಕೊಂಡು ಎಲ್ಲರಿಗೂ ಅಚ್ಚರಿ ಮೂಡಿಸಿದರು.
ಅಷ್ಟಕ್ಕೂ ರಚಿತಾ ಇಲ್ಲಿಗೆ ಯಾವುದೋ ಕೇಸ್ ಪ್ರಯುಕ್ತ ಹೋಗಿರಲಿಲ್ಲ. ಕಮಿಷನರ್ ಕಚೇರಿಯಲ್ಲಿ ನಡೆದ ಕಾರ್ಯಕ್ರಮಕ್ಕೆ ರಚಿತಾ ಅತಿಥಿಯಾಗಿ ಹೋಗಿದ್ದರು.
ಈ ವೇಳೆ ಅಲ್ಲಿ ಪೊಲೀಸ್ ಅಧಿಕಾರಿಗಳು ರಚಿತಾ ರಾಂ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡಿದ್ದಷ್ಟೇ ಅಲ್ಲದೆ, ಸೆಲ್ಫೀ ಪಡೆದುಕೊಂಡು ಖುಷಿಪಟ್ಟರು. ಈ ವೇಳೆ ರಚಿತಾಗೆ ಸನ್ಮಾನ ಕಾರ್ಯಕ್ರಮವೂ ನಡೆಯಿತು.