ಬೆಂಗಳೂರು: ನವರಸನಾಯಕ ಜಗ್ಗೇಶ್ ಮಾತನಾಡಿದರೆ ಅಲ್ಲಿ ನಗು ಇದ್ದೇ ಇರುತ್ತದೆ. ಈ ಬಾರಿ ಜಗ್ಗೇಶ‍್ ಹಾಸ್ಯದ ಮೂಲಕವೇ ಹಳೆಯ ದಿನಗಳನ್ನು ನೆನೆಸಿಕೊಂಡಿದ್ದಾರೆ.
ಜಗ್ಗೇಶ್ ಯಾರದ್ದೂ ಶೀಫಾರಸ್ಸು ಇಲ್ಲದೇ ಸ್ವಯಂ ಪರಿಶ್ರಮದಿಂದ ಚಿತ್ರರಂಗದಲ್ಲಿ ಮೇಲೆ ಬಂದವರು. ಇದೀಗ ರಾಘವೇಂದ್ರ ಸ್ಟೋರ್ಸ್ ಸಿನಿಮಾ ಚಿತ್ರೀಕರಣದಲ್ಲಿ ಜಗ್ಗೇಶ್ ಬಿಡುವಿನ ವೇಳೆ ತಮ್ಮ ಆರಂಭದ ದಿನಗಳಲ್ಲಿ ಯಾವ ರೀತಿ ಅವಕಾಶಕ್ಕಾಗಿ ಅಂಗಲಾಚುತ್ತಿದ್ದೆ ಎಂದು ತಮಾಷೆಯಾಗಿ ಹೇಳಿಕೊಂಡಿದ್ದಾರೆ.
ಈ ಬಗ್ಗೆ ವಿಡಿಯೋ ಮಾಡಿರುವ ಜಗ್ಗೇಶ್, ನಂಗೂ ಫಿಲಂಲ್ಲೆಲ್ಲಾ ಸೇರಬೇಕೆಂದು ಆಸೆ ಇದೆ ಸರ್. ಸ್ವಿಮ್ಮಿಂಗ್, ಹಾರ್ಸ್ ರೈಡಿಂಗ್ ಎಲ್ಲಾ ಗೊತ್ತು ಸರ್. ಪ್ಲೀಸ್ ಸರ್ ಒಂದು ಚಾನ್ಸ್ ಕೊಡಿ ಸಾರ್ ಎಂದಿದ್ದಾರೆ. ತಮ್ಮ ಆರಂಭದ ದಿನಗಳಲ್ಲಿ ನಿರ್ಮಾಪಕರು, ನಿರ್ದೇಶಕರ ಬಳಿ ಹೀಗೆಯೇ ಅವಕಾಶಕ್ಕಾಗಿ ಅಂಗಲಾಚುತ್ತಿದ್ದೆ ಎಂದು ಜಗ್ಗೇಶ್ ಹಳೆಯ ದಿನಗಳನ್ನು ನೆನಸಿಕೊಂಡಿದ್ದಾರೆ.