Select Your Language

Notifications

webdunia
webdunia
webdunia
webdunia

ಒಂಭತ್ತನೇ ದಿಕ್ಕು ಬಿಡುಗಡೆ ದಿಡೀರ್ ಮುಂದೂಡಿಕೆ

ಒಂಭತ್ತನೇ ದಿಕ್ಕು ಬಿಡುಗಡೆ ದಿಡೀರ್ ಮುಂದೂಡಿಕೆ
ಬೆಂಗಳೂರು , ಗುರುವಾರ, 23 ಡಿಸೆಂಬರ್ 2021 (10:25 IST)
ಬೆಂಗಳೂರು: ಡಿಸೆಂಬರ್ 31 ರಂದು ಬಿಡುಗಡೆಯಾಗಬೇಕಿದ್ದ ಲೂಸ್ ಮಾದ ಯೋಗಿ ನಾಯಕರಾಗಿರುವ ‘ಒಂಭತ್ತನೇ ದಿಕ್ಕು’ ಸಿನಿಮಾ ರಿಲೀಸ್ ದಿನಾಂಕ ದಿಡೀರ್ ಮುಂದೂಡಿಕೆಯಾಗಿದೆ.

ನಿರ್ದೇಶಕ ದಯಾಳ್ ಪದ್ಮನಾಭನ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಡಿಸೆಂಬರ್ 31 ರಂದು ಈಗಾಗಲೇ ಲವ್ ಯೂ ರಚ್ಚು, ಹುಟ್ಟುಹಬ್ಬದ ಶುಭಾಶಯಗಳು ಸಿನಿಮಾ ರಿಲೀಸ್ ಆಗುತ್ತಿದೆ. ಅದರ ಜೊತೆಗೆ ರಾಜ್ಯಾದ್ಯಂತ ಥಿಯೇಟರ್ ಗಳಲ್ಲಿ ಈಗಾಗಲೇ ರಿಲೀಸ್ ಆಗಿರುವ ಪುಷ್ಪ ಸಿನಿಮಾವಿದೆ.

ಹೀಗಾಗಿ ಒಂದೇ ದಿನ ಈ ಸಿನಿಮಾವನ್ನೂ ಬಿಡುಗಡೆ ಮಾಡಿ ನಷ್ಟ ಮಾಡಿಕೊಳ್ಳುವುದು ಬೇಡ ಎಂಬ ಕಾರಣಕ್ಕೆ ಸಿನಿಮಾ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದೆ. ಜನವರಿ 28 ರಂದು ಚಿತ್ರ ಬಿಡುಗಡೆ ಮಾಡಲು ಚಿತ್ರತಂಡ ತೀರ್ಮಾನಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸರಿಗಮಪ ವೇದಿಕೆಯಲ್ಲಿ ಹಾಡಿದ ಅನಿಲ್ ಕುಂಬ್ಳೆ