Select Your Language

Notifications

webdunia
webdunia
webdunia
Saturday, 12 April 2025
webdunia

ಸ್ಯಾಂಡಲ್ ವುಡ್ ಹಿರಿಯ ನಿರ್ದೇಶಕ ಕೆ.ವಿ. ರಾಜು ಇನ್ನಿಲ್ಲ

ಕೆ.ವಿ. ರಾಜು
ಬೆಂಗಳೂರು , ಶುಕ್ರವಾರ, 24 ಡಿಸೆಂಬರ್ 2021 (10:01 IST)
ಬೆಂಗಳೂರು: ಇತ್ತೀಚೆಗಷ್ಟೇ ಪುನೀತ್ ರಾಜ್ ಕುಮಾರ್, ಶಿವರಾಂ ಕಳೆದುಕೊಂಡ ದುಃಖದಲ್ಲಿರುವ ಸ್ಯಾಂಡಲ್ ವುಡ್ ಗೆ ವರ್ಷಾಂತ್ಯದಲ್ಲಿ ಮತ್ತೊಂದು ಸಾವಿನ ಆಘಾತ ಸಿಕ್ಕಿದೆ.

ಹಿರಿಯ ನಿರ್ದೇಶಕ ಕೆ.ವಿ. ರಾಜು ಮೃತಪಟ್ಟಿರುವ ಸುದ್ದಿ ಬಂದಿದೆ. ಕನ್ನಡದಲ್ಲಿ ಹುಲಿಯಾ, ಇಂದ್ರಜಿತ್, ಬೆಳ್ಳಿ ಕಾಲುಂಗುರ, ಯುದ್ಧಕಾಂಡ ಸೇರಿದಂತೆ ಸೂಪರ್ ಹಿಟ್ ಸಿನಿಮಾಗಳ ನಿರ್ದೇಶಕರಾಗಿದ್ದರು.

ಅಷ್ಟೇ ಅಲ್ಲದೆ, ಹಿಂದಿಯಲ್ಲೂ ಅಮಿತಾಭ್ ಬಚ್ಚನ್ ಗೂ ನಿರ್ದೇಶನ ಮಾಡಿದ ಖ್ಯಾತಿ ಅವರದ್ದು. 1984 ರಲ್ಲಿ ಒಲವೆ ಬದುಕು ಚಿತ್ರದ ಮೂಲಕ ಅವರ ಚಿತ್ರ ಜೀವನ ಆರಂಭವಾಗಿತ್ತು. ನಿರ್ದೇಶನ ಮಾತ್ರವಲ್ಲದೆ, ಸಂಭಾಷಣೆಕಾರರಾಗಿಯೂ ಗುರುತಿಸಿಕೊಂಡಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಮೊದಲ ವಾರವೇ ದಾಖಲೆ ಮಾಡಿದ ‘ಪುಟ್ಟಕ್ಕನ ಮಕ್ಕಳು’