Publish Date: Fri, 24 Dec 2021 (09:13 IST)
Updated Date: Fri, 24 Dec 2021 (09:13 IST)
ಮುಂಬೈ: 2019 ರ ಸಿಡ್ನಿ ಟೆಸ್ಟ್ ನಲ್ಲಿ ತಮ್ಮನ್ನು ಆಡುವ ಬಳಗದಿಂದ ಹೊರಗಿಟ್ಟು ಕುಲದೀಪ್ ಯಾದವ್ ರನ್ನು ಹೊಗಳಿದ್ದಕ್ಕೆ ತನಗೆ ನೋವಾಗಿತ್ತು ಎಂದು ಹೇಳಿಕೆ ನೀಡಿದ್ದ ರವಿಚಂದ್ರನ್ ಅಶ್ವಿನ್ ಗೆ ಮಾಜಿ ಕೋಚ್ ರವಿಶಾಸ್ತ್ರಿ ತಿರುಗೇಟು ನೀಡಿದ್ದಾರೆ.
ನನ್ನ ಎದುರೇ ಕುಲದೀಪ್ ಯಾದವ್ ವಿದೇಶದಲ್ಲಿ ಭಾರತದ ನಂ.1 ಸ್ಪಿನ್ನರ್ ಎಂದಾಗ ನನಗೆ ಆಘಾತವಾಗಿತ್ತು. ನನ್ನನ್ನು ಯಾರೂ ಬೆಂಬಲಿಸುತ್ತಿಲ್ಲ ಎನಿಸಿತು ಎಂದು ರವಿಶಾಸ್ತ್ರಿ ವಿರುದ್ಧ ಇತ್ತೀಚೆಗೆ ಅಸಮಾಧಾನ ಹೊರಹಾಕಿದ್ದರು.
ಈ ಬಗ್ಗೆ ಪ್ರತಿಕ್ರಿಯಿಸಿರುವ ರವಿಶಾಸ್ತ್ರಿ ಒಂದು ವೇಳೆ ನನ್ನ ಹೇಳಿಕೆಯಿಂದ ಅಶ್ವಿನ್ ಗೆ ಅಂದು ನೋವಾಗಿದ್ದರೆ ನನಗೆ ಸಂತೋಷ. ನನ್ನ ಕೆಲಸ ಬೆಣ್ಣೆ ಹಚ್ಚುವುದು ಮಾತ್ರವಾಗಿರಲಿಲ್ಲ. ಆವತ್ತು ಕುಲದೀಪ್ ಯಾದವ್ ಅತ್ಯುತ್ತಮ ಫಾರ್ಮ್ ನಲ್ಲಿದ್ದರು. ಹೀಗಾಗಿ ಅವರಿಗೆ ಅವಕಾಶ ಕೊಡಲಾಯಿತು. ಒಬ್ಬ ಕೋಚ್ ನಿಮ್ಮ ಬಗ್ಗೆ ಏನಾದರೂ ಹೇಳಿದರೆ ಮನೆಗೆ ಹೋಗಿ ಅಳುತ್ತಾ ಕೂರಬೇಕೇ? ಅದನ್ನು ತಪ್ಪು ಎಂದು ಪ್ರೂವ್ ಮಾಡಲು ನೀವು ಸಾಧಿಸಿ ತೋರಿಸಬೇಕು ಎಂದು ಅಶ್ವಿನ್ ಗೆ ಕುಟುಕಿದ್ದಾರೆ.