ಸೆಂಚೂರಿಯನ್: ಭಾರತ ಮತ್ತು ದ.ಆಫ್ರಿಕಾ ನಡುವಿನ ಟೆಸ್ಟ್ ಸರಣಿ ಡಿಸೆಂಬರ್ 26 ರಿಂದ ಆರಂಭವಾಗಲಿದ್ದು, ಆಫ್ರಿಕಾ ಕ್ರಿಕೆಟ್ ಮಂಡಳಿ ಕೊರೋನಾ ನಿಯಮಾವಳಿಗಳನ್ನು ಬಿಡುಗಡೆ ಮಾಡಿದೆ.
ಒಂದು ವೇಳೆ ಸರಣಿ ಮಧ‍್ಯೆ ಯಾವುದೇ ಆಟಗಾರ ಅಥವಾ ಸಹಾಯಕ ಸಿಬ್ಬಂದಿಗಳಲ್ಲಿ ಕೊರೋನಾ ಸೋಂಕು ದೃಢಪಟ್ಟರೆ ಆತನನ್ನು ಐಸೋಲೇಟ್ ಮಾಡಲಾಗುತ್ತದೆ. ಆದರೆ ಕ್ರಿಕೆಟ್ ಸರಣಿಗೆ ಯಾವುದೇ ಅಡ್ಡಿಯಿಲ್ಲದೇ ಮುಂದುವರಿಯಲಿದೆ.
ಈಗಾಗಲೇ ಆಫ್ರಿಕಾ ಕ್ರಿಕೆಟ್ ಮಂಡಳಿ ಮೈದಾನದಲ್ಲಿ ಪ್ರೇಕ್ಷಕರಿಲ್ಲದೇ ಸರಣಿ ನಡೆಸಲು ತೀರ್ಮಾನಿಸಿದೆ. ಆಟಗಾರರಿಗೆ ಈಗಾಗಲೇ ಸುರಕ್ಷಿತ ಬಯೋ ಬಬಲ್ ವಾತಾವರಣ ಸೃಷ್ಟಿಸಲಾಗಿದೆ. ಹಾಗಿದ್ದರೂ ಪಾಸಿಟಿವ್ ಕೇಸ್ ಕಂಡುಬಂದರೆ ಅಂತಹ ಆಟಗಾರರನ್ನು ಮಾತ್ರ 14 ದಿನಗಳ ಕಾಲ ಐಸೋಲೇಟ್ ಮಾಡಲಾಗುತ್ತದೆ ಎಂದು ಮಂಡಳಿ ಹೇಳಿದೆ.