Select Your Language

Notifications

webdunia
webdunia
webdunia
webdunia

ದ.ಆಫ್ರಿಕಾದಲ್ಲಿ ಭಾರತದ ಪರ ಗರಿಷ್ಠ ರನ್ ಸಾಧಕರಿವರು

ದ.ಆಫ್ರಿಕಾದಲ್ಲಿ ಭಾರತದ ಪರ ಗರಿಷ್ಠ ರನ್ ಸಾಧಕರಿವರು
ಜೊಹಾನ್ಸ್ ಬರ್ಗ್ , ಗುರುವಾರ, 23 ಡಿಸೆಂಬರ್ 2021 (11:45 IST)
ಜೊಹಾನ್ಸ್ ಬರ್ಗ್: ದ.ಆಫ್ರಿಕಾದಲ್ಲಿ ಟೆಸ್ಟ್ ಸರಣಿ ಗೆಲುವಿನ ಕನಸು ನನಸು ಮಾಡಿಕೊಳ್ಳಲು ಟೀಂ ಇಂಡಿಯಾ ಹೊರಟಿದೆ. ಈ ಹೊತ್ತಿನಲ್ಲಿ ಆಫ್ರಿಕಾ ನಾಡಿನಲ್ಲಿ ಗರಿಷ್ಠ ರನ್ ಸಂಪಾದಿಸಿದ ಟಾಪ್ 2 ಆಟಗಾರರು ಯಾರು ಎಂದು ನೋಡೋಣ.

ಸಚಿನ್ ತೆಂಡುಲ್ಕರ್: ಕಾಮನಬಿಲ್ಲಿನ ನಾಡಿನಲ್ಲಿ ಗರಿಷ್ಠ ರನ್ ಸಂಪಾದಿಸಿದ ಭಾರತೀಯ ಬ್ಯಾಟ್ಸ್ ಮನ್ ಎಂಬ ಹೆಮ್ಮೆ ಸಚಿನ್ ತೆಂಡುಲ್ಕರ್ ಅವರದ್ದು. ಅವರು 28 ಟೆಸ್ಟ್ ಇನಿಂಗ್ಸ್ ಗಳಿಂದ 1161 ರನ್ ಗಳಿಸಿದ್ದಾರೆ. ಈ ಪೈಕಿ ಐದು ಶತಕಗಳೂ ಸೇರಿವೆ.

ರಾಹುಲ್ ದ್ರಾವಿಡ್: ಪ್ರಸಕ್ತ ಟೀಂ ಇಂಡಿಯಾದ ಕೋಚ್ ಆಗಿರುವ ‘ವಾಲ್’ ರಾಹುಲ್ ದ್ರಾವಿಡ್ ನಂ.2 ಆಟಗಾರ. ದ್ರಾವಿಡ್ 22 ಇನಿಂಗ್ಸ್ ಗಳಿಂದ ಒಂದು ಶತಕ ಸೇರಿದಂತೆ 624 ರನ್ ಗಳಿಸಿದ್ದಾರೆ.

ಇದಲ್ಲದೆ ಟಾಪ್ 5 ರೊಳಗೆ ಪ್ರಸಕ್ತ ನಾಯಕ ವಿರಾಟ್ ಕೊಹ್ಲಿ ಕೂಡಾ ಸೇರಿದ್ದಾರೆ. ಅವರಿಗೆ ಈ ಸರಣಿಯಲ್ಲಿ ದ್ರಾವಿಡ್ ರನ್ನು ಹಿಂದಿಕ್ಕಿ ನಂ.2 ಆಗುವ ಅವಕಾಶವಿದೆ. ಈ ಸರಣಿಯಲ್ಲಿ ಕೊಹ್ಲಿ ಬ್ಯಾಟಿಂಗ್ ನಲ್ಲಿ ಮಿಂಚಿದರೆ ಅವರ ಮೇಲಿರುವ ಕಳಪೆ ಬ್ಯಾಟಿಂಗ್ ಅಪವಾದವೂ ನಿವಾರಣೆಯಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಭಾರತ-ದ.ಆಫ್ರಿಕಾ ಸರಣಿಯಲ್ಲಿ ಕೊರೋನಾ ಪಾಸಿಟಿವ್ ಆದರೆ ಏನು ಮಾಡ್ತಾರೆ ಗೊತ್ತಾ?