ಬೆಂಗಳೂರು: ಚಿರು ಸರ್ಜಾ ಸಾವಿನ ಬಳಿಕ ಬಣ್ಣದ ಲೋಕದಿಂದ ದೂರವುಳಿದಿದ್ದ ನಟಿ ಮೇಘನಾ ರಾಜ್ ಕಲರ್ಸ್ ಕನ್ನಡದ ಡ್ಯಾನ್ಸಿಂಗ್ ಸ್ಟಾರ್ ರಿಯಾಲಿಟಿ ಶೋ ಮೂಲಕ ತೆರೆಗೆ ಬಂದಿದ್ದರು.
ಆದರೆ ಮೊದಲ ಎಪಿಸೋಡ್ ನಲ್ಲಿ ಮಾತ್ರ ಅತಿಥಿಯಾಗಿ ಮೇಘನಾ ತೀರ್ಪು ನೀಡಲು ಬಂದಿದ್ದರು. ಆದರೆ ಈ ಒಂದು ಎಪಿಸೋಡ್ ನಲ್ಲೇ ವೀಕ್ಷಕರಿಗೆ ಮೇಘನಾರನ್ನು ಬಿಟ್ಟುಕೊಡಲು ಇಷ್ಟವಿರಲಿಲ್ಲ. ಹೀಗಾಗಿ ಮೇಘನಾ ಚೆನ್ನಾಗಿ ತೀರ್ಪು ಕೊಡುತ್ತಾರೆ, ಅವರನ್ನು ಎಲ್ಲಾ ಎಪಿಸೋಡ್ ಗಳಲ್ಲೂ ತೀರ್ಪುಗಾರರಾಗಿ ಮುಂದುವರಿಯಿರಿ ಎಂದು ವೀಕ್ಷಕರು ಒತ್ತಾಯಿಸಿದ್ದರು.
ಇದೀಗ ವೀಕ್ಷಕರ ಒತ್ತಾಯದ ಮೇರೆಗೆ ಮುಂದಿನ ದಿನಗಳಲ್ಲಿ ಡ್ಯಾನ್ಸಿಂಗ್ ಸ್ಟಾರ್ ರಿಯಾಲಿಟಿ ಶೋನ ಎಲ್ಲಾ ಎಪಿಸೋಡ್ ಗಳಿಗೂ ತೀರ್ಪುಗಾರರಾಗಿ ಮುಂದುವರಿಯಲು ಮೇಘನಾ ನಿರ್ಧರಿಸಿದ್ದಾರೆ. ಇನ್ನು ಮುಂದೆ ನಾನು ಪರ್ಮನೆಂಟ್ ಜಡ್ಜ್ ಎಂದು ಮೇಘನಾ ಹೇಳಿಕೊಂಡಿದ್ದಾರೆ. ಮೇಘನಾ ನಿರ್ಧಾರ ವೀಕ್ಷಕರಿಗೂ ಇಷ್ಟವಾಗಿದೆ.