ಬೆಂಗಳೂರು: ಸಪ್ತಸಾಗರದಾಚೆಯೆಲ್ಲೊ ಶೂಟಿಂಗ್ ನ ಅರ್ಧಭಾಗ ಮುಗಿದಿದ್ದು, ಇದೀಗ ಕೆಲವು ದಿನ ಬ್ರೇಕ್ ತೆಗೆದುಕೊಳ್ಳಲಾಗಿದೆ. ಇದಕ್ಕೆ ಕಾರಣ ರಕ್ಷಿತ್ ಶೆಟ್ಟಿ.
ಮುಂದಿನ ಹಂತದ ಚಿತ್ರೀಕರಣಕ್ಕೆ ಮೊದಲು ರಕ್ಷಿತ್ ತಮ್ಮ ಪಾತ್ರಕ್ಕೆ ತಕ್ಕಂತೆ ದೇಹ ತೂಕ ಇಳಿಸಿಕೊಳ್ಳಬೇಕಾಗಿದೆ. ಬರೋಬ್ಬರಿ 15 ಕೆ.ಜಿ. ತೂಕ ಇಳಿಸಿಕೊಳ್ಳಲಿದ್ದಾರಂತೆ ರಕ್ಷಿತ್.
ಇದಕ್ಕಾಗಿ ಚಿತ್ರತಂಡ ಚಿತ್ರೀಕರಣಕ್ಕೆ ಕೆಲವು ದಿನಗಳ ಬ್ರೇಕ್ ಕೊಟ್ಟಿದ್ದು, ರಕ್ಷಿತ್ ರೆಡಿಯಾದ ಬಳಿಕ ಸಿನಿಮಾದ ಮುಂದಿನ ಹಂತದ ಚಿತ್ರೀಕರಣ ಪ್ರಾರಂಭವಾಗಲಿದೆ. ಹೇಮಂತ್ ರಾವ್ ನಿರ್ದೇಶನದ ಸಪ್ತಸಾಗರದಾಚೆಯೆಲ್ಲೊ ಸಿನಿಮಾ ಶೇ.50 ರಷ್ಟು ಚಿತ್ರೀಕರಣ ಮುಕ್ತಾಯವಾಗಿದೆ.