ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಮ್ಮನ್ನಗಲಿ ಇಂದಿಗೆ ಮೂರು ತಿಂಗಳು ಕಳೆದಿದೆ. ಈ ಹಿನ್ನಲೆಯಲ್ಲಿ ಇಂದು ಪತ್ನಿ ಅಶ್ವಿನಿ, ಮಗಳು ವಂದಿತಾ ಸೇರಿದಂತೆ ಇಡೀ ರಾಜ್ ಕುಟುಂಬ ಇಂದು ಪುನೀತ್ ಸಮಾಧಿಗೆ ಬಂದು ಪೂಜೆ ಸಲ್ಲಿಸಿದೆ.
ರಾಘವೇಂದ್ರ ರಾಜ್ ಕುಮಾರ್ ನೇತೃತ್ವದಲ್ಲಿ ಪೂಜೆ ನಡೆಯಿತು. ಜೊತೆಗೆ ಪುನೀತ್ ಇಷ್ಟದ ತಿನಿಸುಗಳನ್ನು ಇರಿಸಿ ನಮನ ಸಲ್ಲಿಸಲಾಯಿತು.
ಇದರ ಜೊತೆಗೆ ಪುನೀತ್ ಸ್ಮರಣಾರ್ಥ ಸಸಿ ವಿತರಣೆ ಮಾಡುವ ಮೂಲಕ ರಾಜ್ ಕುಟುಂಬ ಗೌರವ ಸಲ್ಲಿಸಿದರು. ಪುನೀತ್ ಗೆ ಪರಿಸರದ ಬಗ್ಗೆ ಅಪಾರ ಕಾಳಜಿಯಿತ್ತು. ಹೀಗಾಗಿ ಅವರ ಸ್ಮರಣಾರ್ಥ ಸಸಿ ವಿತರಿಸಲಾಯಿತು.
ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!