ಬೆಂಗಳೂರು: ನಟ ಕಮ್ ನಿರ್ದೇಶಕ ಡಾರ್ಲಿಂಗ್ ಕೃಷ್ಣ ದಂಪತಿ ಎಲ್ಲೆರೆದುರೇ ಜಗಳವಾಡಿಕೊಂಡು ಸುದ್ದಿಯಾಗಿದ್ದಾರೆ! ಆದರೆ ಈ ಜಗಳ ನಡೆದಿದ್ದು ಲವ್ ಮಾಕ್ಟೇಲ್ 2 ಸಿನಿಮಾ ಟ್ರೈಲರ್ ರಿಲೀಸ್ ವಿಚಾರವಾಗಿ.
ಸಿನಿಮಾ ಟ್ರೈಲರ್ ಬಿಡುಗಡೆ ವಿಚಾರವನ್ನು ಜಗಳವಾಡುವ ಮೂಲಕ ದಂಪತಿ ಪ್ರಚಾರ ನಡೆಸಿದ್ದಾರೆ. ಆದರೆ ಈ ಜಗಳ ಜಸ್ಟ್ ಟ್ರೈಲರ್ ಪ್ರಚಾರಕ್ಕಾಗಿ ಮಾತ್ರ.
ಪಕ್ಕಾ ಲವ್ ಮಾಕ್ಟೇಲ್ ಸಂಭಾಷಣೆ ಶೈಲಿಯಲ್ಲೇ ಮಿಲನಾ ಟ್ರೈಲರ್ ಯಾವಾಗ ಎಂದು ದಬಾಯಿಸಿ ಕೇಳುತ್ತಾರೆ. ಇದಕ್ಕೆ ಕೃಷ್ಣ ಸದ್ಯದಲ್ಲೇ ರಿಲೀಸ್ ಮಾಡುವುದಾಗಿ ಉತ್ತರಿಸುತ್ತಾರೆ. ಈ ಮೂಲಕ ದಂಪತಿ ಜಗಳವಾಡುತ್ತಲೇ ತಮ್ಮ ಸಿನಿಮಾ ಟ್ರೈಲರ್ ಗೆ ಪ್ರಚಾರ ಕೊಟ್ಟಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.