Select Your Language

Notifications

webdunia
webdunia
webdunia
webdunia

ಹಿರಿಯ ನಟ ಅಶೋಕ್ ರಾವ್ ಕ್ಯಾನ್ಸರ್ ನಿಂದ ನಿಧನ

ಹಿರಿಯ ನಟ ಅಶೋಕ್ ರಾವ್ ಕ್ಯಾನ್ಸರ್ ನಿಂದ ನಿಧನ
ಬೆಂಗಳೂರು , ಬುಧವಾರ, 2 ಫೆಬ್ರವರಿ 2022 (16:12 IST)
ಬೆಂಗಳೂರು: ಸ್ಯಾಂಡಲ್ ವುಡ್ ನ ಮತ್ತೊಂದು ಕೊಂಡಿ ಇಂದು ಕಳಚಿಬಿದ್ದಿದೆ. ಹಿರಿಯ ನಟ ಅಶೋಕ್ ರಾವ್ ನಿನ್ನೆ ವಿಧಿವಶರಾಗಿದ್ದಾರೆ.

ಕ್ಯಾನ್ಸರ್ ಖಾಯಿಲೆಯಿಂದ ಬಳಲುತ್ತಿದ್ದ ಅವರು ಅದಕ್ಕಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ತಡರಾತ್ರಿ 12.30 ಕ್ಕೆ ನಿಧನರಾಗಿದ್ದಾರೆ.

ವಿಲನ್ ಪಾತ್ರಗಳಲ್ಲೇ ಮಿಂಚುತ್ತಿದ್ದ ಅಶೋಕ್ ರಾವ್ ಕಂಚಿನ ಕಂಠದಿಂದಾಗಿ ಎಲ್ಲರ ಗಮನ ಸೆಳೆಯುತ್ತಿದ್ದರು. ಡಾ.ರಾಜ್ ಕುಮಾರ್ ಅವರ ಪರಶುರಾಮ್ ಸಿನಿಮಾದ ವಿಲನ್ ಪಾತ್ರದಲ್ಲಿ ಅವರನ್ನು ಇಂದಿಗೂ ಜನ ಗುರುತಿಸುತ್ತಾರೆ. ಹಳೆಯ ತಲೆಮಾರಿನ ನಟರಿಂದ ಹಿಡಿದು ಇತ್ತೀಚೆಗಿನ ನಟರವರೆಗೆ ನಟಿಸಿದ ಹಿರಿಮೆ ಅವರದ್ದು. ತಮ್ಮ ವೃತ್ತಿ ಜೀವನದಲ್ಲಿ ಸುಮಾರು 100 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದರು. ಇಂದು ಅವರ ನಿಧನಕ್ಕೆ ಸ್ಯಾಂಡಲ್ ವುಡ್ ಕಂಬನಿ ಮಿಡಿಯುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಶಕ್ತಿಧಾಮದ ಮಕ್ಕಳಿಗೆ ಪುನೀತ್, ಡಾ.ರಾಜ್ ಸಮಾಧಿ ದರ್ಶನ ಮಾಡಿಸಿದ ಶಿವಣ್ಣ ದಂಪತಿ