Select Your Language

Notifications

webdunia
webdunia
webdunia
webdunia

ಲವ್ ಮಾಕ್ಟೇಲ್ ಪ್ರೆಸ್ ಮೀಟ್ ನಲ್ಲಿ ಡಾಲಿ ಧನಂಜಯ್ ಪ್ರಪೋಸ್ ಬಗ್ಗೆ ಬಾಯ್ಬಿಟ್ಟ ಅಮೃತಾ ಅಯ್ಯಂಗಾರ್

ಅಮೃತಾ ಅಯ್ಯಂಗಾರ್
ಬೆಂಗಳೂರು: ಇತ್ತೀಚೆಗೆ ಗೋಲ್ಡನ್ ಸ್ಟಾರ್ ಗಣೇಶ್ ನಡೆಸಿಕೊಡುವ ಗೋಲ್ಡನ್ ಗ್ಯಾಂಗ್ ಕಾರ್ಯಕ್ರಮದಲ್ಲಿ ಡಾಲಿ ಧನಂಜಯ್, ನಟಿ ಅಮೃತಾ ಅಯ್ಯಂಗಾರ್ ಗೆ ಪ್ರಪೋಸ್ ಮಾಡಿದ್ದು ಸಖತ್ ಸುದ್ದಿಯಾಗಿತ್ತು.

ಈ ರಿಯಾಲಿಟಿ ಶೋನಲ್ಲಿ ಇಬ್ಬರೂ ಪ್ರಪೋಸ್ ಮಾಡಿರುವುದು ನೋಡಿ ನೆಟ್ಟಿಗರು ಇಬ್ಬರೂ ನಿಜವಾಗಿಯೂ ಪ್ರೀತಿಸುತ್ತಿದ್ದಾರೆ ಎನಿಸುತ್ತಿದೆ ಎಂದು ಕಾಮೆಂಟ್ ಮಾಡಿದ್ದರು. ಇದರ ಬಗ್ಗೆ ಅಮೃತಾಗೆ ನಿನ್ನೆ ನಡೆದ ಲವ್ ಮಾಕ್ಟೇಲ್ 2 ಚಿತ್ರದ ಪತ್ರಿಕಾಗೋಷ್ಠಿಯಲ್ಲೂ ಪ್ರಶ್ನೆ ಎದುರಾಯ್ತು.

ಇದಕ್ಕೆ ಉತ್ತರಿಸಿರುವ ಅಮೃತಾ ಡಾಲಿ ನನಗೆ ರಿಯಾಲಿಟಿ ಶೋನಲ್ಲಿ ಟಾಸ್ಕ್ ಮಾಡುವ ಸಲುವಾಗಿ ಪ್ರಪೋಸ್ ಮಾಡಿದ್ದರು. ಡಾಲಿ ಲವ್ ಸೀನ್ ಮಾಡುವಾಗ ನಾಚಿಕೊಳ್ತಾರೆ ಎಂದಿದ್ದಕ್ಕೆ ಪ್ರಪೋಸ್ ಮಾಡುವ ಸೀನ್ ಮಾಡಿಸಿದರು. ಅದು ರಿಯಲ್ ಆಗಿ ಅಲ್ಲ. ಡಾಲಿ ಅಭಿನಯಿಸಿದ್ದು ನೋಡಿ ನಾನು ಭಾವುಕಳಾದೆ. ನಮ್ಮಿಬ್ಬರ ನಡುವೆ ನಿಜವಾಗಿಯೂ ಪ್ರೀತಿ-ಪ್ರೇಮವಿಲ್ಲ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬೀದಿ ನಾಯಿಯ ಅಂತ್ಯಸಂಸ್ಕಾರಕ್ಕೆ ಬಂದ ನಟಿ ರಮ್ಯಾ