ಬೆಂಗಳೂರು: ಗೋಲ್ಡನ್ ಸ್ಟಾರ್ ಗಣೇಶ್ ನಾಯಕರಾಗಿರುವ ಯೋಗರಾಜ್ ಭಟ್ ನಿರ್ದೇಶನದ ಗಾಳಿಪಟ 2 ಸಿನಿಮಾದ ಸ್ಯಾಟ್ ಲೈಟ್ ಹಕ್ಕುಗಳು ಭರ್ಜರಿ ಮೊತ್ತಕ್ಕೆ ಜೀ ಸಂಸ್ಥೆಗೆ ಸೇಲ್ ಆಗಿದೆ.
									
			
			 
 			
 
 			
			                     
							
							
			        							
								
																	ಕೇವಲ ಸ್ಯಾಟ್ ಲೈಟ್ ಹಕ್ಕು ಮಾತ್ರವಲ್ಲ, ಒಟಿಟಿ ರಿಲೀಸ್ ಗೂ ಖರೀದಿ ಮಾಡಲಾಗಿದೆ. ಹೀಗಾಗಿ ಸಿನಿಮಾ ಒಟಿಟಿಯಲ್ಲಿ ನೇರವಾಗಿ ಬಿಡುಗಡೆಯಾದರೂ ಅಚ್ಚರಿಯಿಲ್ಲ. ಜೀ5 ಒಟಿಟಿ ಹಕ್ಕು ಪಡೆದುಕೊಂಡಿದೆ.
									
										
								
																	ಮೂಲಗಳ ಪ್ರಕಾರ ಬರೋಬ್ಬರಿ 8 ಕೋಟಿ ರೂ.ಗೆ ಸಿನಿಮಾ ಸೇಲ್ ಆಗಿದೆ ಎನ್ನಲಾಗಿದೆ. ಗಣೇಶ್ ಜೊತೆಗೆ ದೂದ್ ಪೇಡ ದಿಗಂತ್, ಪವನ್ ಕುಮಾರ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ಈ ಸಿನಿಮಾ ಬಗ್ಗೆ ಅಭಿಮಾನಿಗಳಲ್ಲಿ ಸಾಕಷ್ಟು ನಿರೀಕ್ಷೆಯಿದೆ.