ಚೆನ್ನೈ: ದಳಪತಿ ವಿಜಯ್ ಮತ್ತು ರಶ್ಮಿಕಾ ಮಂದಣ್ಣ ಮೊದಲ ಬಾರಿಗೆ ಜೊತೆಯಾಗಿ ನಟಿಸಲಿರುವ ಸಿನಿಮಾಗೆ ಟೈಟಲ್ ಘೋಷಣೆಯಾಗಿದೆ.
ಇಂದು ವಿಜಯ್ ಜನ್ಮದಿನ. ಈ ಪ್ರಯುಕ್ತ ನಿನ್ನೆ ಸಂಜೆಯೇ ದಳಪತಿ 66 ನೇ ಸಿನಿಮಾದ ಟೈಟಲ್ ಘೋಷಣೆ ಮಾಡಲಾಗಿದೆ. ಈ ಸಿನಿಮಾಗೆ ವಾರಿಸು ಎಂದು ಟೈಟಲ್ ಫಿಕ್ಸ್ ಆಗಿದ್ದು, ಫಸ್ಟ್ ಲುಕ್ ಕೂಡಾ ಬಿಡುಗಡೆಯಾಗಿದೆ.
ಈ ಸಿನಿಮಾಗೆ ವಂಶಿ ಪಡಿಪ್ಪಳ್ಳಿ ನಿರ್ದೇಶನ ಮಾಡುತ್ತಿದ್ದಾರೆ. ಈಗಾಗಲೇ ಸಿನಿಮಾ ಚಿತ್ರೀಕರಣ ಹಂತದಲ್ಲಿದೆ. ವಿಜಯ್ ಈ ಸಿನಿಮಾದಲ್ಲಿ ಎನ್ ಆರ್ ಐ ಉದ್ಯಮಿಯ ಪಾತ್ರ ಮಾಡುತ್ತಿದ್ದಾರೆ ಎನ್ನಲಾಗಿದೆ.