ಹೈದರಾಬಾದ್: ಅಮಿತಾಭ್ ಬಚ್ಚನ್, ಪ್ರಭಾಸ್ ಪ್ರಮುಖ ಪಾತ್ರದಲ್ಲಿರುವ ಪ್ರಾಜೆಕ್ಟ್ ಕೆ ಸೆಟ್ ನಲ್ಲಿ ದೀಪಿಕಾ ಪಡುಕೋಣೆಗೆ ಹೃದಯಬಡಿತದಲ್ಲಿ ಏರುಪೇರಾಗಿ ಆಸ್ಪತ್ರೆಗೆ ದಾಖಲಾಗಿದ್ದರು ಎಂಬ ಸುದ್ದಿ ವೈರಲ್ ಆಗಿತ್ತು. ಅಂದು ನಿಜಕ್ಕೂ ನಡೆದಿದ್ದೇನೆ ಎಂದು ಪ್ರಾಜೆಕ್ಟ್ ಕೆ ನಿರ್ಮಾಪಕ ಅಶ್ವಿನಿ ದತ್ತ್ ಹೇಳಿದ್ದಾರೆ.
ದೀಪಿಕಾಗೆ ಆರೋಗ್ಯ ಸಮಸ್ಯೆ ಗಂಭೀರವಾಗಿರಲಿಲ್ಲ. ಬಿಪಿ ಏರುಪೇರಾಗಿತ್ತು. ತೀರಾ ಸುಸ್ತಾಗಿದ್ದರು ಎಂಬ ಕಾರಣಕ್ಕೆ ಒಂದು ಗಂಟೆ ಕಾಲ ಆಸ್ಪತ್ರೆಗೆ ತೆರಳಿ ವಾಪಸ್ ಆಗಿದ್ದರು. ಬಂದ ತಕ್ಷಣವೇ ನಾವು ಹೇಳಿದರೂ ಕೇಳದೇ ಶೂಟಿಂಗ್ ಗೆ ತೊಂದರೆಯಾಗಬಾರದು ಎಂದು ಅವರು ಶೂಟಿಂಗ್ ನಲ್ಲಿ ಭಾಗಿಯಾದರು. ಅವರು ತೀರಾ ವೃತ್ತಿಪರ ನಟಿ.
ಆದರೆ ಆಕೆಯ ಆರೋಗ್ಯದ ಬಗ್ಗೆ ಮಾಧ್ಯಮಗಳಲ್ಲಿ ಎಲ್ಲೆ ಮೀರಿ ಸುದ್ದಿಗಳು ಹರಿದಾಡಿದವು. ಅಸಲಿಗೆ ಅವರಿಗೆ ಅಷ್ಟೊಂದು ಗಂಭೀರ ಸಮಸ್ಯೆಯಾಗಿರಲಿಲ್ಲ ಎಂದು ಅಶ್ವಿನಿ ದತ್ತ್ ಹೇಳಿದ್ದಾರೆ.