Publish Date: Mon, 20 Jun 2022 (08:40 IST)
Updated Date: Mon, 20 Jun 2022 (09:15 IST)
ಹೈದರಾಬಾದ್: ಹೊಂಬಾಳೆ ಫಿಲಂಸ್ ನಿರ್ಮಿಸುತ್ತಿರುವ ಪ್ರಶಾಂತ್ ನೀಲ್ ನಿರ್ದೇಶನದ ಸಲಾರ್ ನಲ್ಲಿ ನಾಯಕ ನಟ ಪ್ರಭಾಸ್ ಪಾತ್ರದ ಬಗ್ಗೆ ಲೇಟೆಸ್ಟ್ ಸುದ್ದಿಯೊಂದು ಹರಿದಾಡುತ್ತಿದೆ.
ಈ ಸಿನಿಮಾ ಪೋಸ್ಟರ್ ಹೊರತುಪಡಿಸಿ ಚಿತ್ರತಂಡ ಇದುವರೆಗೆ ಯಾವುದೇ ಗುಟ್ಟು ಬಿಟ್ಟುಕೊಟ್ಟಿಲ್ಲ. ಹಾಗಿದ್ದರೂ ಸಿನಿಮಾ ಬಗ್ಗೆ ಹಲವು ಸುದ್ದಿಗಳು ಹರಿದಾಡುತ್ತಲೇ ಇರುತ್ತವೆ.
ಇದೀಗ ಸಲಾರ್ ನಲ್ಲಿ ಪ್ರಭಾಸ್ ಡಬಲ್ ರೋಲ್ ಮಾಡಲಿದ್ದಾರೆ ಎಂಬ ಸುದ್ದಿಯಿದೆ. ಇದೊಂದು ಆಕ್ಷನ್ ಥ್ರಿಲ್ಲರ್ ಸಿನಿಮಾವಾಗಲಿದ್ದು, ಸಹೋದರರ ಪಾತ್ರದಲ್ಲಿ ದ್ವಿಪಾತ್ರದಲ್ಲಿ ಅಭಿನಯಿಸಲಿದ್ದಾರೆ ಎನ್ನಲಾಗಿದೆ. ದ್ವಿಪಾತ್ರಗಳ ಪೈಕಿ ಒಂದು ಪಾತ್ರದ ಶೂಟಿಂಗ್ ಈಗಾಗಲೇ ಮುಗಿದಿದ್ದು, ಇನ್ನೊಂದು ಪಾತ್ರದ ಶೂಟಿಂಗ್ ಸದ್ಯದಲ್ಲೇ ಆರಂಭವಾಗಲಿದೆ ಎನ್ನಲಾಗುತ್ತಿದೆ.