ಚೆನ್ನೈ: ದಳಪತಿ ವಿಜಯ್ ಇಂದು 48 ನೇ ಜನ್ಮದಿನ ಆಚರಿಸಿಕೊಳ್ಳುತ್ತಿದ್ದು, ಈಗಾಗಲೇ ಅವರ 66 ನೇ ಸಿನಿಮಾ ಟೈಟಲ್ ಪೋಸ್ಟರ್ ಬಿಡುಗಡೆಯಾಗುವ ಮೂಲಕ ಅಭಿಮಾನಿಗಳಿಗೆ ಭರ್ಜರಿ ಸುದ್ದಿ ಸಿಕ್ಕಿದೆ.
ಇದರ ಜೊತೆಗೆ ವಿಜಯ್ ಅಭಿಮಾನಿಗಳಿಗೆ ಇಂದು ಮತ್ತೊಂದು ಸುದ್ದಿ ಸಿಗುವ ಸಾಧ‍್ಯತೆಯಿದೆ. ಎಲ್ಲರಿಗೂ ತಿಳಿದಿರುವ ಹಾಗೆ ಕ್ರಿಕೆಟಿಗ ಧೋನಿ ಈಗ ತಮಿಳಿನಲ್ಲಿ ಸಿನಿಮಾ ನಿರ್ಮಾಣಕ್ಕೆ ಕೈ ಹಾಕುತ್ತಿದ್ದಾರೆ.
ಈ ಸಿನಿಮಾದಲ್ಲಿ ನಟಿಸಲು ಧೋನಿ ಈಗಾಗಲೇ ವಿಜಯ್ ಗೆ ಮನವಿ ಮಾಡಿದ್ದಾರಂತೆ. ಇದರ ಬಗ್ಗೆ ಇಂದು ಘೋಷಣೆ ಹೊರಬೀಳುವ ಸಾಧ‍್ಯತೆಯಿದೆ ಎನ್ನಲಾಗಿದೆ. ಒಂದು ವೇಳೆ ಈ ಸಿನಿಮಾದ ಬಗ್ಗೆ ಸಿಹಿ ಸುದ್ದಿ ಸಿಕ್ಕರೆ ವಿಜಯ್ ಅಭಿಮಾನಿಗಳಿಗೆ ಈ ಬರ್ತ್ ಡೇ ನಿಜಕ್ಕೂ ಸ್ಪೆಷಲ್ ಆಗಲಿದೆ.