Publish Date: Tue, 21 Jun 2022 (17:00 IST)
Updated Date: Tue, 21 Jun 2022 (17:02 IST)
ಬೆಂಗಳೂರು: ಗೋವಾದಲ್ಲಿ ಜಂಪಿಂಗ್ ಮಾಡುವ ವೇಳೆ ಪೆಟ್ಟು ಮಾಡಿಕೊಂಡಿದ್ದ ನಟ ದಿಗಂತ್ ಮಂಚಾಲೆ ಈಗ ಏರ್ ಲಿಫ್ಟ್ ಮೂಲಕ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಆಗಮಿಸಿದ್ದಾರೆ.
ದಿಗಂತ್ ಜೊತೆಗೆ ಪತ್ನಿ ಐಂದ್ರಿತಾ ಕೂಡಾ ಇದ್ದಾರೆ. ಗೋವಾದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿತ್ತು. ಕುತ್ತಿಗೆಗೆ ಬಲವಾದ ಏಟು ಬಿದ್ದಿರುವುದರಿಂದ ಅವರು ಎದ್ದೇಳುವ ಸ್ಥಿತಿಯಲ್ಲಿಲ್ಲ. ಕುತ್ತಿಗೆಗೆ ಬೆಲ್ಟ್ ಹಾಕಲಾಗಿದ್ದು, ಸದ್ಯಕ್ಕೆ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಅವರ ಆರೋಗ್ಯದ ಬಗ್ಗೆ ಮಾಹಿತಿ ನೀಡಿರುವ ಕುಟುಂಬಸ್ಥರು, ಯಾರೂ ಆತಂಕಪಡಬೇಕಾಗಿಲ್ಲ. ದಿಗಂತ್ ಸ್ಥಿತಿ ಗಂಭೀರವಾಗಿಲ್ಲ ಎಂದಿದ್ದಾರೆ.