Select Your Language

Notifications

webdunia
webdunia
webdunia
webdunia

ಮೈಸೂರು ಆರ್ಕೆಸ್ಟ್ರಾಗೆ ಸಾಥ್ ಕೊಡಲಿದ್ದಾರೆ ನಟಿ ರಮ್ಯಾ

ಮೈಸೂರು ಆರ್ಕೆಸ್ಟ್ರಾಗೆ ಸಾಥ್ ಕೊಡಲಿದ್ದಾರೆ ನಟಿ ರಮ್ಯಾ
ಬೆಂಗಳೂರು , ಮಂಗಳವಾರ, 21 ಜೂನ್ 2022 (08:50 IST)
ಬೆಂಗಳೂರು: ನಟಿ ರಮ್ಯಾ ಇತ್ತೀಚೆಗೆ ಸ್ಯಾಂಡಲ್ ವುಡ್ ನ ಸಿನಿಮಾಗಳಲ್ಲಿ ತೆರೆಯ ಹಿಂದೆ ಸಪೋರ್ಟ್ ಕೊಡುತ್ತಾ ಬಂದಿದ್ದು, ಮುಂದೊಂದು ದಿನ ಮತ್ತೆ ನಟನೆಗೆ ಕಮ್ ಬ್ಯಾಕ್ ಮಾಡುವ ಸುಳಿವು ಕೊಡುತ್ತಿದ್ದಾರೆ.

ಇದೀಗ ರಮ್ಯಾ ಆರ್ಕೆಸ್ಟ್ರಾ ಮೈಸೂರು ಎಂಬ ಮ್ಯೂಸಿಕಲ್ ಎಂಟರ್ ಟೈನರ್ ಸಿನಿಮಾದ ಟ್ರೈಲರ್ ಲಾಂಚ್ ಮಾಡಲಿದ್ದಾರೆ. ಇಂದು ಮಧ್ಯಾಹ್ನ 12.34 ಕ್ಕೆ ಚಿತ್ರದ ಟ್ರೈಲರ್ ನ್ನು ರಮ್ಯಾ ಡಿಜಿಟಲ್ ಆಗಿ ಲಾಂಚ್ ಮಾಡಲಿದ್ದಾರೆ.

ಈ ಸಿನಿಮಾವನ್ನು ಕೆಆರ್ ಜಿ ಸ್ಟುಡಿಯೋಸ್ ಮತ್ತು ಡಾಲಿ ಧನಂಜಯ್ ಅವರ ಡಾಲಿ ಪಿಕ್ಚರ್ಸ್ ಅರ್ಪಣೆ ಮಾಡುತ್ತಿದೆ. ರಘು ದೀಕ್ಷಿತ್ ಸಂಗೀತದ ಜೊತೆಗೆ ನಿರ್ಮಾಣವನ್ನೂ ಮಾಡಿದ್ದಾರೆ. ಡಾಲಿ ಧನಂಜಯ್ ಹಾಡುಗಳನ್ನು ಬರೆದಿದ್ದಾರೆ. ಈ ಮೊದಲು ಬಾರಿಸು ಕನ್ನಡ ಡಿಂಡಿಮವ ಹಾಡು ಮಾಡಿದ್ದ ಅದೇ ತಂಡ ಈ ಚಿತ್ರವನ್ನು ಮಾಡುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪವಿತ್ರಾ ಲೋಕೇಶ್ ಮರುಮದುವೆ ಸುದ್ದಿ! ತೆಲುಗು ನಟನ ಕೈ ಹಿಡಿದರಾ ಸ್ಯಾಂಡಲ್ ವುಡ್ ನಟಿ?