ಬೆಂಗಳೂರು: ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ವಿಕ್ರಮ್ ರವಿಚಂದ್ರನ್ ಅಭಿನಯದ ತ್ರಿವಿಕ್ರಮ್ ಸಿನಿಮಾದ ಪ್ರಿ ರಿಲೀಸ್ ಈವೆಂಟ್ ಇಂದು ನಡೆಯಲಿದೆ.
ಬೆಂಗಳೂರಿನ ನಂದಿ ಲಿಂಕ್ಸ್ ಗ್ರೌಂಡ್ ನಲ್ಲಿ ಇಂದು ತ್ರಿವಿಕ್ರಮ ಸಿನಿಮಾದ ಪ್ರಿ ರಿಲೀಸ್ ಕಾರ್ಯಕ್ರಮ ನಡೆಯಲಿದ್ದು, ಈ ವೇಳೆ ಹಾಡುಗಳೂ ಬಿಡುಗಡೆಯಾಗಲಿವೆ.
ಇದು ವಿಕ್ರಮ್ ರವಿಚಂದ್ರನ್ ಅವರ ಚೊಚ್ಚಲ ಸಿನಿಮಾವಾಗಿದೆ. ಹೀಗಾಗಿ ರವಿಚಂದ್ರನ್ ಮತ್ತು ಚಿತ್ರರಂಗದ ಘಟಾನುಘಟಿ ತಾರೆಯರು ಇಂದು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಶಿವರಾಜ್ ಕುಮಾರ್, ಡಾಲಿ ಧನಂಜಯ್, ಉಪೇಂದ್ರ ಸೇರಿದಂತೆ ಅನೇಕರು ಇಂದಿನ ಕಾರ್ಯಕ್ರಮದಲ್ಲಿ ಭಾಗಿಯಾಗಿ ವಿಕ್ರಮ್ ಗೆ ಶುಭ ಕೋರಲಿದ್ದಾರೆ.