Publish Date: Sun, 19 Jun 2022 (17:35 IST)
Updated Date: Sun, 19 Jun 2022 (17:37 IST)
ಬೆಂಗಳೂರು: ವಿಕ್ರಾಂತ್ ರೋಣ ಸಿನಿಮಾ ಬಿಡುಗಡೆ ಹೊಸ್ತಿಲಲ್ಲಿ ಮಾಧ್ಯಮಗಳ ಜೊತೆ ಮಾತನಾಡಿರುವ ಕಿಚ್ಚ ಸುದೀಪ್ ತಾವು ಸಿನಿಮಾ ಮಾಡುವುದು ಬೇರೆ ಸಿನಿಮಾಗಳ ದಾಖಲೆ ಬ್ರೇಕ್ ಮಾಡಲು ಅಲ್ಲ ಎಂದಿದ್ದಾರೆ.
ಇಂದು ಬಿಜಿಎಸ್ ಮೈದಾನದಲ್ಲಿ ಪೊಲೀಸ್ ತಂಡದ ಜೊತೆ ಕ್ರಿಕೆಟ್ ಆಡಿದ ಬಳಿಕ ಮಾಧ್ಯಮಗಳು ವಿಕ್ರಾಂತ್ ರೋಣ ಬಗ್ಗೆ ಪ್ರಶ್ನಿಸಿದಾಗ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ.
ಆರ್ ಆರ್ ಆರ್, ಕೆಜಿಎಫ್ ಸಿನಿಮಾಗೆ ಅವರ ಪರಿಶ್ರಮಕ್ಕೆ ತಕ್ಕ ಫಲ ಸಿಕ್ಕಿದೆ. ನಾವು ಸಿನಿಮಾ ಮಾಡುವುದು ಬೇರೆಯವರ ರೆಕಾರ್ಡ್ ಬ್ರೇಕ್ ಮಾಡಲು ಅಲ್ಲ. ವಿಕ್ರಾಂತ್ ರೋಣ ನನ್ನ ಹೃದಯಕ್ಕೆ ಹತ್ತಿರವಾದ ಸಿನಿಮಾ. ಈಗಾಗಲೇ ರಾ ರಾ ರಕ್ಕಮ್ಮ ಹಾಡು ಎಲ್ಲೆಡೆ ರೀಚ್ ಆಗಿದೆ. ವಿಕ್ರಾಂತ್ ರೋಣ ಬಹುಭಾಷೆಗಳಲ್ಲಿ ಬಿಡುಗಡೆಯಾಗುತ್ತಿದ್ದು, ಪ್ರಯತ್ನಕ್ಕೆ ತಕ್ಕ ಫಲ ಸಿಗಲಿದೆ ಎಂಬ ವಿಶ್ವಾಸವಿದೆ ಎಂದಿದ್ದಾರೆ.