ಚೆನ್ನೈ: ಟಾಲಿವುಡ್ ಸ್ಟಾರ್ ನಟ ಅಜಿತ್ ಕುಮಾರ್ ಬೈಕ್ ರೈಡಿಂಗ್ ನಲ್ಲೇ ಯುರೋಪ್ ಪ್ರವಾಸ ಮಾಡುತ್ತಿದ್ದಾರೆ. ಅವರ ಬೈಕ್ ರೈಡಿಂಗ್ ಫೋಟೋಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಅಜಿತ್ ಗೆ ಬೈಕ್ ರೇಸ್ ಎಂದರೆ ತುಂಬಾ ಇಷ್ಟ. ಸಿನಿಮಾ ಬಿಟ್ಟರೆ ಅವರು ಬೈಕ್ ಪ್ರಪಂಚದಲ್ಲೇ ಇದ್ದು ಬಿಡುತ್ತಾರೆ. ಇದೀಗ ವಲಿಮೈ ಸಿನಿಮಾ ಬಳಿಕ ಸಿಕ್ಕ ಬಿಡುವಿನ ವೇಳೆಯಲ್ಲಿ ಅಜಿತ್ ಯುರೋಪ್ ನ ವಿವಿಧ ದೇಶಗಳಲ್ಲಿ ಸುತ್ತಾಟ ನಡೆಸುತ್ತಿದ್ದಾರೆ.
ಅಡ್ವೆಂಚರ್ ಬೈಕ್ ರೈಡರ್ ಸುಪ್ರೇಜ್ ವೆಂಕಟ್ ಜೊತೆ ಅಜಿತ್ ಬೈಕ್ ನಲ್ಲಿ ಟೂರ್ ಮಾಡುತ್ತಿದ್ದಾರೆ. ಬಿಳಿ ಗಡ್ಡ, ಕೂದಲು ಬಿಟ್ಟುಕೊಂಡು ವಿಶಿಷ್ಟ ಲುಕ್ ನಲ್ಲಿ ಅಜಿತ್ ಕಂಗೊಳಿಸುತ್ತಿದ್ದಾರೆ.