Publish Date: Wed, 22 Jun 2022 (08:30 IST)
Updated Date: Wed, 22 Jun 2022 (09:03 IST)
ಬೆಂಗಳೂರು: ಗೋವಾದಲ್ಲಿ ಜಂಪ್ ಮಾಡುವಾಗ ಗಾಯಗೊಂಡಿದ್ದ ಸ್ಯಾಂಡಲ್ ವುಡ್ ನಟ ದಿಗಂತ್ ಮಂಚಾಲೆ ಆರೋಗ್ಯ ಸ್ಥಿತಿ ಬಗ್ಗೆ ಲೇಟೆಸ್ಟ್ ಮಾಹಿತಿ ಇಲ್ಲಿದೆ.
ದಿಗಂತ್ ರನ್ನು ತಕ್ಷಣವೇ ಏರ್ ಲಿಫ್ಟ್ ಮೂಲಕ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರ ಕುತ್ತಿಗೆಗೆ ಬಲವಾದ ಏಟು ಬಿದ್ದಿತ್ತು. ಆದರೆ ಅದೃಷ್ಟವಶಾತ್ ಬೆನ್ನು ಮೂಳೆಗೆ ಯಾವುದೇ ಅಪಾಯವಾಗಿರಲಿಲ್ಲ.
ಇದೀಗ ವೈದ್ಯರ ಸಲಹೆ ಮೇರೆಗೆ ಕುತ್ತಿಗೆಗೆ ಆಪರೇಷನ್ ಮಾಡಲಾಗಿದೆ. ಇನ್ನು, ಒಂದೆರಡು ದಿನಗಳಲ್ಲೇ ಅವರು ಎದ್ದು ಓಡಾಡಬಹುದು. ಕೆಲವು ದಿನಗಳ ವಿಶ್ರಾಂತಿ ಬಳಿಕ ಮತ್ತೆ ಎಂದಿನಂತೆ ಶೂಟಿಂಗ್ ನಲ್ಲಿ ಭಾಗಿಯಾಗಲಿದ್ದಾರೆ.