Select Your Language

Notifications

webdunia
webdunia
webdunia
webdunia

ಶಿವರಾಜ್ ಕುಮಾರ್ ಅವರ ಮುಂಬರುವ ಸಿನಿಮಾಗಳ ಲಿಸ್ಟ್

ಶಿವರಾಜ್ ಕುಮಾರ್ ಅವರ ಮುಂಬರುವ ಸಿನಿಮಾಗಳ ಲಿಸ್ಟ್
ಬೆಂಗಳೂರು , ಭಾನುವಾರ, 17 ಅಕ್ಟೋಬರ್ 2021 (08:55 IST)
ಬೆಂಗಳೂರು: ಸ್ಯಾಂಡಲ್ ವುಡ್ ನ ಚಿರ ಯೌವನಿಗ ಶಿವರಾಜ್ ಕುಮಾರ್ ಇಂದಿನ ಯುವ ನಟರನ್ನೂ ಮೀರಿಸುವಂತೇ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.


ಈಗಲೂ ಶಿವರಾಜ್ ಕುಮಾರ್ ಬೇಡಿಕೆಯ ನಟ ಎನ್ನುವುದಕ್ಕೆ ಅವರ ಕೈಯಲ್ಲಿರುವ ಚಿತ್ರಗಳೇ ಸಾಕ್ಷಿ. ಅವರ ಮುಂಬರುವ ಸಿನಿಮಾಗಳ ಪಟ್ಟಿ ಇಲ್ಲಿದೆ ನೋಡಿ.

ಭಜರಂಗಿ 2: ಈ ಸಿನಿಮಾ ಇದೇ ತಿಂಗಳ ಅಂತ್ಯಕ್ಕೆ ಥಿಯೇಟರ್ ನಲ್ಲಿ ತೆರೆ ಕಾಣುತ್ತಿದೆ. ಎ ಹರ್ಷ ನಿರ್ದೇಶನದ ಈ ಸಿನಿಮಾ ಬಗ್ಗೆ ಭಾರೀ ನಿರೀಕ್ಷೆಯಿದೆ.

ಭೈರಾಗಿ: ಭೈರಾಗಿ ಸಿನಿಮಾದಲ್ಲಿ ಶಿವಣ್ಣ ಜೊತೆಗೆ ಪೃಥ್ವಿ ಅಂಬರ್, ಡಾಲಿ ಧನಂಜಯ್ ಕೂಡಾ ಅಭಿನಯಿಸಿದ್ದಾರೆ. ಈ ಸಿನಿಮಾ ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ.
ನೀ ಸಿಗೋವರೆಗೂ: ಶಿವಣ್ಣ ಅಭಿನಯದ ಪಕ್ಕಾ ಲವ್ ಸ್ಟೋರಿ ಸಿನಿಮಾ ನೀ ಸಿಗೋವರೆಗೂ ಇತ್ತೀಚೆಗೆ ಮುಹೂರ್ತ ನೆರವೇರಿಸಿ ಚಿತ್ರೀಕರಣ ಆರಂಭವಾಗಿದೆ. ಮುಂದಿನ ವರ್ಷಕ್ಕೆ ತೆರೆ ಕಾಣುವ ನಿರೀಕ್ಷೆಯಿದೆ.

ವೇಧಾ: ಶಿವಣ್ಣ ವಿಶಿಷ್ಟ ಪಾತ್ರದಲ್ಲಿ ಕಾಣಿಸಿಕೊಂಡಿರುವ ವೇದಾ ಸಿನಿಮಾದ ಶೂಟಿಂಗ್ ಆರಂಭವಾಗಬೇಕಿದೆ. ಇದು ಶಿವಣ್ಣನ 125 ನೇ ಸಿನಿಮಾ ಎಂಬುದು ವಿಶೇಷ.

ಈ ಸಿನಿಮಾಗಳಲ್ಲದೇ ರಿಷಬ್ ಶೆಟ್ಟಿ ಜೊತೆಗೆ ಮತ್ತೊಂದು ಸಿನಿಮಾವನ್ನು ಅವರು ಮಾಡಲಿದ್ದಾರೆ ಎಂಬ ಸುದ್ದಿಯಿದೆ. ಇದು ಇನ್ನೂ ಅನೌನ್ಸ್ ಆಗಿಲ್ಲ. ಅದಲ್ಲದೆ, ದುನಿಯಾ ವಿಜಿ ಕೂಡಾ ಶಿವಣ್ಣನಿಗೆ ನಿರ್ದೇಶನ ಮಾಡುವುದಾಗಿ ಹೇಳಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮತ್ತೆ ಇಡಿ ಸಮನ್ಸ್ ಗೆ ಚಕ್ಕರ್ ಹೊಡೆದ ನಟಿ ಜಾಕ್ವೆಲಿನ್ ಫರ್ನಾಂಡಿಸ್