Publish Date: Sat, 16 Oct 2021 (11:31 IST)
Updated Date: Sat, 16 Oct 2021 (09:33 IST)
ಬೆಂಗಳೂರು: ನಿರೀಕ್ಷೆಯಂತೇ ಸ್ಯಾಂಡಲ್ ವುಡ್ ಗೆದ್ದಿದೆ. ದಸರಾ ಹಬ್ಬದ ರಜೆಯ ನಡುವೆ ಸಾಲು ಸಾಲು ಸಿನಿಮಾಗಳು ಸ್ಯಾಂಡಲ್ ವುಡ್ ನ್ನು ಗೆಲ್ಲಿಸಿದೆ.
ಲಾಕ್ ಡೌನ್ ನಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಚಿತ್ರರಂಗಕ್ಕೆ, ಥಿಯೇಟರ್ ಮಾಲಿಕರಿಗೆ ಕೋಟಿಗೊಬ್ಬ3, ಸಲಗ, ಶ್ರೀಕೃಷ್ಣ ಎಟ್ ಜಿಮೈಲ್ ಡಾಟ್ ಕಾಮ್, ನಿನ್ನ ಸನಿಹಕೆ ಸಿನಿಮಾಗಳು ಹೊಸ ಬೂಸ್ಟ್ ನೀಡಿವೆ.
ಮುಂದಿನ ವಾರ ಮತ್ತಷ್ಟು ಚಿತ್ರಗಳು ತೆರೆಗೆ ಬರಲಿದ್ದು, ಸ್ಯಾಂಡಲ್ ವುಡ್ ಮತ್ತೆ ಹಳಿಗೆ ಬರುವ ಲಕ್ಷಣಗಳು ಕಾಣುತ್ತಿವೆ. ಸಾಲು ಸಾಲು ರಜೆಗಳಿರುವುದರಿಂದ ಮತ್ತು ಸ್ಟಾರ್ ನಟರ ಸಿನಿಮಾಗಳು ಬಿಡುಡೆಯಾಗುತ್ತಿರುವುದರಿಂದ ಜನ ಥಿಯೇಟರ್ ನತ್ತ ಬರಲು ಆಸಕ್ತಿ ತೋರುತ್ತಿರುವುದು ಉತ್ತಮ ಬೆಳವಣಿಗೆ ಎನ್ನಬಹುದು.