Publish Date: Sat, 16 Oct 2021 (09:02 IST)
Updated Date: Sat, 16 Oct 2021 (09:23 IST)
ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ 3 ಸಿನಿಮಾ ನಿನ್ನೆ ಅಡೆತಡೆಗಳನ್ನು ದಾಟಿ ಭರ್ಜರಿ ಓಪನ್ ಕಂಡಿದೆ. ಮೊದಲ ದಿನವೇ ಜನರ ಅಧ‍್ಬುತ ಪ್ರತಿಕ್ರಿಯೆ ಸಿಕ್ಕಿದೆ. ಚಿತ್ರ ನೋಡಿದ ಜನ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಸಿನಿಮಾದಲ್ಲಿ ಎಲ್ಲರಿಗೂ ಇಷ್ಟವಾಗಿದ್ದು, ಕಿಚ್ಚ ಸುದೀಪ್ ನಟನೆಯ ಜೊತೆಗೆ ಅದ್ಭುತ ಮೇಕಿಂಗ್. ಪ್ರತೀ ಫ್ರೇಮ್ ನಲ್ಲಿ ಶ್ರೀಮಂತಿಕೆ ಎದ್ದು ಕಾಣುತ್ತಿದೆ. ಒಂದೊಳ್ಳೆಯ ಬಿಗಿ ಕತೆಯಿದೆ. ಫ್ಯಾಮಿಲಿ ಸಮೇತ ಕೂತು ನೋಡಬಹುದಾದ ಭರ್ಜರಿ ಎಂಟರ್ ಟೈನರ್ ಎಂದು ಟ್ವಿಟಟಿಗರು ಅಭಿಪ್ರಾಯಪಟ್ಟಿದ್ದಾರೆ.
ಅಲ್ಲದೆ, ಪ್ರತಿಯೊಬ್ಬರ ನಟನೆಯೂ ಎದ್ದು ಕಾಣುವಂತಿದೆ.ಅದರಲ್ಲೂ ಆಶಿಕಾ ರಂಗನಾಥ್ ಸೆಕ್ಸಿಯಾಗಿ ಕಾಣುತ್ತಿದ್ದಾರೆ. ಅದರಲ್ಲೂ ಸೆಕೆಂಡ್ ಹಾಫ್ ತುಂಬಾ ಚೆನ್ನಾಗಿದೆ. ಫ್ಲ್ಯಾಶ್ ಬ್ಯಾಕ್ ಕತೆ ಕುತೂಹಲಕಾರಿಯಾಗಿದೆ ಎಂದು ಸಿನಿಮಾ ನೋಡಿದವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.