Publish Date: Fri, 15 Oct 2021 (15:54 IST)
Updated Date: Fri, 15 Oct 2021 (16:18 IST)
ಕೋಟಿಗೊಬ್ಬ 3' ತಂಡ ಈವರೆಗೂ ಬಿಡುಗಡೆ ಮಾಡದೇ ಇರುವ ಒಂದು ಹೊಸ ಪೋಸ್ಟರ್ ಅನ್ನು ಈಗ ಸುದೀಪ್ ಹಂಚಿಕೊಂಡಿದ್ದಾರೆ. ಬಿಳಿ ಕೂದಲು, ಉದ್ದ ಗಡ್ಡ ಬಿಟ್ಟುಕೊಂಡು ವೃದ್ಧನ ಗೆಟಪ್ನಲ್ಲಿ ಕಿಚ್ಚ ಕಾಣಿಸಿಕೊಂಡಿದ್ದಾರೆ.
ಕೋಟಿಗೊಬ್ಬ 3' ಟ್ರೇಲರ್ ನೋಡಿದ ಅಭಿಮಾನಿಗಳಿಗೆ ಸುದೀಪ್ ಅವರ ಹಲವು ಗೆಟಪ್ಗಳು ಕಾಣಿಸಿದ್ದವು. ಆದರೆ ಈವರೆಗೂ ಚಿತ್ರತಂಡ ಬಿಡುಗಡೆ ಮಾಡದೇ ಇರುವ ಒಂದು ಹೊಸ ಪೋಸ್ಟರ್ ಅನ್ನು ಈಗ ಸುದೀಪ್ ಹಂಚಿಕೊಂಡಿದ್ದಾರೆ. ಇದರಲ್ಲಿ ಬಿಳಿ ಕೂದಲು, ಉದ್ದ ಗಡ್ಡ ಬಿಟ್ಟುಕೊಂಡು ವೃದ್ಧನ ಗೆಟಪ್ನಲ್ಲಿ ಕಿಚ್ಚ ಕಾಣಿಸಿಕೊಂಡಿದ್ದಾರೆ. ಅದನ್ನು ನೋಡಿದ ಫ್ಯಾನ್ಸ್ಗೆ 'ಕೋಟಿಗೊಬ್ಬ 3' ಬಗ್ಗೆ ಇದ್ದ ಕ್ರೇಜ್ ಇನ್ನಷ್ಟು ಹೆಚ್ಚಾಗಿದೆ.
'ಚಿತ್ರಮಂದಿರಗಳಲ್ಲಿ ಕೋಟಿಗೊಬ್ಬ 3 ಪ್ರದರ್ಶನ ಆರಂಭ ಆಗಿದೆ. ನಿಮ್ಮೆಲ್ಲರ ಪ್ರೀತಿಗೆ ಧನ್ಯವಾದಗಳು. ಮುಂಜಾನೆಯ ಶೋಗಳ ಸಂಭ್ರಮದ ವಿಡಿಯೋಗಳನ್ನು ಅಪ್ಲೋಡ್ ಮಾಡಲಾಗುತ್ತಿದೆ. ಇಂಥ ಎಗ್ಸೈಟ್ಮೆಂಟ್ ನೋಡಲು ಖುಷಿ ಆಗುತ್ತಿದೆ. ನೀವೆಲ್ಲರೂ ನಮಗೆ ನೀಡಿದ ಬೆಂಬಲಕ್ಕೆ ಬೆಲೆ ಕಟ್ಟಲಾಗದು' ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ.