Publish Date: Sat, 16 Oct 2021 (10:40 IST)
Updated Date: Sat, 16 Oct 2021 (10:48 IST)
ಬೆಂಗಳೂರು: ಡಾಲಿ ಧನಂಜಯ್ ಅಭಿನಯದ ರತ್ನನ್ ಪ್ರಪಂಚ ಇದೇ ಅಕ್ಟೋಬರ್ 22 ರಂದು ಅಮೆಝೋನ್ ಪ್ರೈಮ್ ನಲ್ಲಿ ಬಿಡುಗಡೆಯಾಗುತ್ತಿದೆ.
ಈ ಸಿನಿಮಾದ ಟ್ರೈಲರ್ ಈಗಾಗಲೇ ಬಿಡುಗಡೆಯಾಗಿದೆ. ಇದೀಗ ಟ್ರೈಲರ್ ವೀಕ್ಷಿಸಿದ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ರತ್ನನ್ ಪ್ರಪಂಚವನ್ನು ಕೊಂಡಾಡಿದ್ದಾರೆ.
ಈ ಟ್ರೈಲರ್ ನ್ನು ನೋಡಿ ನಗು ತಡೆಯಲಾಗಲಿಲ್ಲ. ಸಿನಿಮಾ ನೋಡಲು ಕಾತುರಳಳಾಗಿದ್ದೇನೆ. ನೀವೆಲ್ಲಾ ಅದ್ಭುತ ನಟರು ಎಂದು ಸಿನಿಮಾದ ಎಲ್ಲಾ ಪಾತ್ರವರ್ಗದವರನ್ನು ರಮ್ಯಾ ಕೊಂಡಾಡಿದ್ದಾರೆ. ಇತ್ತೀಚೆಗಿನ ದಿನಗಳಲ್ಲಿ ರಮ್ಯಾ ಸ್ಯಾಂಡಲ್ ವುಡ್ ಸಿನಿಮಾಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಳ್ಳುತ್ತಿದ್ದು, ಆಕೆ ಮತ್ತೆ ಸಿನಿಮಾಗೆ ಮರಳುತ್ತಿರುವುದರ ಸೂಚನೆ ಇರಬಹುದಾ ಎಂದು ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ.