Select Your Language

Notifications

webdunia
webdunia
webdunia
webdunia

ಡಾರ್ಲಿಂಗ್ ಕೃಷ್ಣ ‘ಶ್ರೀಕೃಷ್ಣ ಎಟ್ ಜಿಮೈಲ್ ಡಾಟ್ ಕಾಮ್’ ಗೆ ಅನ್ಯಾಯವಾಗುತ್ತಾ?!

ಡಾರ್ಲಿಂಗ್ ಕೃಷ್ಣ ‘ಶ್ರೀಕೃಷ್ಣ ಎಟ್ ಜಿಮೈಲ್ ಡಾಟ್ ಕಾಮ್’ ಗೆ ಅನ್ಯಾಯವಾಗುತ್ತಾ?!
ಬೆಂಗಳೂರು , ಶನಿವಾರ, 16 ಅಕ್ಟೋಬರ್ 2021 (10:28 IST)
ಬೆಂಗಳೂರು: ಡಾರ್ಲಿಂಗ್ ಕೃಷ್ಣ ಸದ್ಯಕ್ಕೆ ಸ್ಯಾಂಡಲ್ ವುಡ್ ನ ಬ್ಯುಸಿಯೆಷ್ಟ್ ನಟ. ಆದರೆ ಈ ಯುವ ಪ್ರತಿಭಾವಂತ ನಾಯಕನಿಗೆ ಅನ್ಯಾಯವಾಗದಿರಲಿ ಎಂದು ಸಿನಿ ಪ್ರಿಯರು ಪ್ರಾರ್ಥಿಸುವಂತಾಗಿದೆ.


ಒಂದೆಡೆ ಥಿಯೇಟರ್ ನಲ್ಲಿ ಕೋಟಿಗೊಬ್ಬ 3, ಸಲಗ ಸಿನಿಮಾಗಳು ಅಬ್ಬರಿಸುತ್ತಿದ್ದರೆ, ಇಂದು ಸದ್ದಿಲ್ಲದೇ ಕೃಷ್ಣ ಅಭಿನಯದ ಶ್ರೀಕೃಷ್ಣ ಎಟ್ ಜಿಮೈಲ್ ಡಾಟ್ ಕಾಮ್ ಎನ್ನುವ ಎಂಟರ್ ಟೈನರ್ ಸಿನಿಮಾ ಬಿಡುಗಡೆಯಾಗುತ್ತಿದೆ.

ಒಂದೇ ಬಾರಿಗೆ ಅದರಲ್ಲೂ ಎರಡು ಸ್ಟಾರ್ ಸಿನಿಮಾಗಳು ಬಿಡುಗಡೆಯಾಗಿರುವಾಗ ಮತ್ತೊಂದು ಸಿನಿಮಾ ಬಿಡುಗಡೆಯಾದರೆ ಅದರಿಂದ ಹೆಚ್ಚು ಲಾಭವಾಗದು. ಅದರಲ್ಲೂ ಕೋಟಿಗೊಬ್ಬ 3, ಸಲಗ ಮುನ್ನೂರಕ್ಕೂ ಹೆಚ್ಚು ಥಿಯೇಟರ್ ನಲ್ಲಿ ಕಾಣುವಾಗ ಶ್ರೀಕೃಷ್ಣ ಎಟ್ ಜಿಮೈಲ್ ಡಾಟ್ ಕಾಮ್ ಗೆ ಪಕ್ಕಾ ತೊಂದರೆಯಾಗಲಿದೆ. ಇದೆಲ್ಲಾ ಗಮನದಲ್ಲಿದ್ದರೂ ನಿರ್ಮಾಪಕರು ಇಂದೇ ಸಿನಿಮಾ ಬಿಡುಗಡೆ ಮಾಡಲು ಹೊರಟಿರುವುದು ವಿಪರ್ಯಾಸ.

Share this Story:

Follow Webdunia kannada

ಮುಂದಿನ ಸುದ್ದಿ

ಕೋಟಿಗೊಬ್ಬ 3 ಸಿನಿಮಾ ಬಗ್ಗೆ ದರ್ಶನ್-ಸುದೀಪ್ ಫ್ಯಾನ್ಸ್ ಕಿತ್ತಾಟ